ಭೂ ಮಂಜರಾತಿಗಾಗಿ ಧರಣಿ ಸತ್ಯಾಗ್ರಹ ಪ್ರತಿಭಟನೆ

ಸಿಂಧನೂರು,ಆ.೨೪-
ಪ.ಜಾತಿ. ಪ.ಪಂಗಡ ಸೇರಿದಂತೆ ಎಲ್ಲ ಜಾತಿಯ ಬಡ ಜನರಿಗೆ ಭೂಮಿ ಹಾಗೂ ನಿವೇಶನ ಕೊಡುವಂತೆ ಅಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ಇಂದು ಮಿನಿ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ಪ್ರತಿಭಟನೆ ನಡೆಸಿದರು.
ತಾಲೂಕಿನ ಜವಳಗೇರಾ ಗ್ರಾಮದ ಮಾಜಿ ಮಂತ್ರಿ ವೆಂಟರಾವ ನಾಡಗೌಡ ಅವರ ಕುಟುಂಬದವರು ಸರ್ಕಾರಿ ಭೂಮಿ ಕಬಳಿಕೆ ಮಾಡಿದ್ದು, ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಸರ್ಕಾರಿ ಭೂ ಮಂಜುರಾತಿಗಾಗಿ ಅರ್ಜಿ ಸಲ್ಲಿಸಿದ ಪ.ಜಾತಿ, ಪ.ಪಂಗಡ ಹಾಗೂ ಎಲ್ಲ ಜಾತಿಯ ಬಡ ಜನರಿಗೆ ವಿವರಿಸುವಂತೆ ಜಿಲ್ಲಾಧಿಕಾರಿಗಳನ್ನು ಎಂ.ಗಂಗಾಧರ ಒತ್ತಾಯ ಮಾಡಿದರು.
ಸರ್ಕಾರಿ ಜಾಗದಲ್ಲಿ ಸುಮಾರು ವರ್ಷಗಳಿಂದ ವಾಸಮಾಡುತ್ತಿರುವ ಹಾಗೂ ಭೂ ಉಳಿಕೆ ಮಾಡುತ್ತಿರುವವರಿಗೆ ನಿವೇಶನ ಹಕ್ಕುಪತ್ರ ಹಾಗೂ ಭೂಮಿ ಪಟ್ಟಾ ನೀಡುವಂತೆ ಹಲವಾರು ಸಲ ತಾಲೂಕಾ ಆಡಳಿತಕ್ಕೆ ಮನವಿ ಮಾಡಿಕೊಂಡರು ಸಹ ಯಾವುದೆ ಪ್ರಯೋಜನವಾಗದೆ ಇರುವುದರಿಂದ ಇಂದು ಅನಿವಾರ್ಯವಾಗಿ ನಿವೇಶನ ವಂಚಿತ ಹಾಗೂ ಭೂಮಿ ಪಟ್ಟಾ ಸಿಗದ ಜನರಿಂದ ತಹಸೀಲ್ದಾರ ಕಛೇರಿಯ ಮಂದೆ ಹೋರಾಟ ಹಮ್ಮಿಕೊಂಡಿದ್ದು ಜಿಲ್ಲಾಧಿಕಾರಿಗಳು ಬರುವವರಿಗೂ ಹೋರಾಟ ನಿಲ್ಲುವುದಿಲ್ಲ ಎಂದು ಹೋರಾಟಗಾರ ಎಂ.ಗಂಗಾಧರ ಮಾತನಾಡಿದರು.
ಧರಣಿ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಸಂಘದ ಮುಖಂಡರಾದ ಮಲ್ಲಯ್ಯ ಕಟ್ಟಿಮನಿ, ಸಂತೋಷ, ಮಾಬುಸಾಬ, ಆದೇಶ, ಹನುಮಂತ, ಹೆಚ್‌ಆರ್ ಹೊಸಮನಿ, ಹಂಪಮ್ಮ, ಅಂಬಮ್ಮ, ರೇಣುಕಾ, ಚೈತ್ರ, ಉಷಾ, ಬಸಮ್ಮ, ರೇಣಕಮ್ಮ, ವೆಂಕಟೇಶ ನಾಯಕ, ತಿಮ್ಮಣ್ಣ, ರಾಮ ಕೃಷ್ಣ, ಲಕ್ಷ್ಮಿ, ಜಗದೀಶ್ವರಿ, ಭಾರತಿ, ನಾಗಮ್ಮ, ಹುಲಗಪ್ಪ ಬಳ್ಳಾರಿ ಸೇರಿದಂತೆ ಇತರರು ಇದ್ದರು.