ಭೂ ಪರಿವರ್ತನೆ ದಂಧೆ ಎಳೆ ಎಳೆಯಾಗಿ ಬಿಡಿಸಿದ ಭಟ್


ಬೆಂಗಳೂರು, ಮಾ. ೧೯- ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂಪರಿವರ್ತನೆಯಲ್ಲಿ ಕಾಣದ ಕೈಗಳ ಕರ್ಮಕಾಂಡವನ್ನು ಆಡಳಿತ ಪಕ್ಷದ ಶಾಸಕ ವಿಧಾನಸಭೆಯಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರು.
ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂಪರಿವರ್ತನೆ ಮಾಡುವ ದೊಡ್ಡ ರಾಕೇಟ್ಟೆ ಇದೆ. ಮಧ್ಯವರ್ತಿಗಳಿಲ್ಲದೆ ಭೂ ಪರಿವರ್ತನೆ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದೆ. ಎಲ್ಲದ್ದಕ್ಕೂ ಹಣ ಕೊಡಬೇಕು. ಆ ಡಳಿತ ಪಕ್ಷದ ಸದಸ್ಯರಾಗಿ ನಾವು ಈ ರೀತಿ ಹೇಳಲು ಬಾರದು ಆದರೆ ಪರಿಸ್ಥಿತಿ ಆ ರೀತಿ ಇದೆ ಎಂದು ಬಿಜೆಪಿಯ ರಘುಪತಿಭಟ್ ವಿಧಾನಸಭೆಯಲ್ಲಿಂದು ಭೂಪರಿವರ್ತನೆಯ ತೊಡಕುಗಳನ್ನು ಬಿಚ್ಚಿಟ್ಟರು.
ಪ್ರಶ್ನೋತ್ತರ ಅವಧಿಯಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕೃಷಿ ವಲಯದಲ್ಲಿನ ೧೦ ಸೆಂಟ್ಸ್‌ವರೆಗಿನ ಭೂಪರಿವರ್ತನೆಗೆ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲೇ ತೀರ್ಮಾನ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದ ಅವರು, ಮಂಗಳೂರು, ಶಿವಮೊಗ್ಗದಲ್ಲಿ ಈ ರೀತಿ ಅವಕಾಶ ನೀಡಲಾಗಿದೆ. ಉಡುಪಿಗೂ ಈ ತೀರ್ಮಾನವನ್ನು ಅನ್ವಯಿಸಬೇಕು ಎಂದು ಒತ್ತಾಯಿಸಿದರು.
೧೦ ಸೆಂಟ್ಸ್ ಅಂದರೆ ೫೦ಘಿ೮೦ ಕೃಷಿ ನಿವೇಶನದ ಭೂಪರಿವರ್ತನೆಗೆ ಪ್ರತಿಯೊಬ್ಬರು ಬೆಂಗಳೂರಿಗೆ ಹೋಗಬೇಕು. ಬೆಂಗಳೂರಿಗೆ ಹೋದ ಯಾವುದೇ ಅರ್ಜಿಗಳು ರಿಜೆಕ್ಟ್ ಆಗುವುದಿಲ್ಲ. ಅಲ್ಲಿ ಬ್ರೋಕರ್ ಮೂಲಕ ಪ್ರತಿ ಸೆಂಟ್‌ಗೆ ೫ ರಿಂದ ೧೦ ಸಾವಿರ ರೂ. ನೀಡಿದರೆ ಭೂಪರಿವರ್ತನೆ ಆಗುತ್ತದೆ. ಹೀಗಾದರೆ ಹೇಗೆ, ಆಡಳಿತ ಪಕ್ಷದವರಾಗಿ ನಾವು ಧರಣಿ ಮಾಡಲು ಸಾಧ್ಯವಿಲ್ಲ ಇದು ದುರಾದೃಷ್ಠ ಎಂದು ಏರಿದ ದ್ವನಿಯಲ್ಲಿ ಹೇಳಿದರು.
ಭೂ ಪರಿವರ್ತನೆ ವೀಕೇಂದ್ರಕರಣವಾಗಬೇಕು. ನಗರಾಭಿವೃದ್ಧಿ ವ್ಯಾಪ್ತಿಯಲ್ಲೇ ಭೂ ಪರಿವರ್ತನೆ ಮಾಡಿ ಎಂದು ಒತ್ತಾಯಿಸಿದರು
ಇದಕ್ಕೆ ದ್ವನಿಗೂಡಿಸಿದ ಬಿಜೆಪಿಯ ಬೋಪಯ್ಯ ಅವರು, ಕೊಡಗಿನಲ್ಲೂ ಮನೆ ನಿರ್ಮಾಣಕ್ಕೆ ಭೂಪರಿವರ್ತನೆಯ ೨ ಸಾವಿರ ಅರ್ಜಿಗಳು ಬಾಕಿ ಇದೆ ಎಂಬುದನ್ನು ಸದನದ ಗಮನಕ್ಕೆ ತಂದರು.
ಭೂಪರಿವರ್ತನೆ ದೊಡ್ಡ ರಾಕೇಟ್, ಬೆಳಗಾವಿ ಜಿಲ್ಲೆಯಲ್ಲೂ ನನ್ನದೆ ಸ್ವಂತ ಭೂಮಿ ಒಂದೂವರೆ ವರ್ಷವಾದರೂ ಭೂಪರಿವರ್ತನೆ ಮಾಡಲು ಸಾದ್ಯವಾಗಿಲ್ಲ. ಅಧಿಕಾರಿಗಲು ಏನೆನೋ ಸಬೂಬು ಹೇಳುತ್ತಾರೆ. ಇದು ದೊಡ್ಡ ರಾಕೇಟ್ ಇದೆ ಇದನ್ನು ಮಟ್ಟಹಾಕಬೇಕು ಎಂದು ಬಿಜೆಪಿಯ ಅಭಯ್‌ಪಾಟೀಲ್ ಹೇಳಿದರು. ಪುತ್ತೂರು ಕ್ಷೇತ್ರದಲ್ಲೂ ಈ ರೀತಿಯ ಸಮಸ್ಯೆಗಳಿವೆ ಇನ್ದನು ಬಗೆಹರಿಸಿ ಎಂದು ಸಂಜೀವ್ ಮಠಂದೂರು ಒತ್ತಾಯಿಸಿದರು.
ಹಲವು ಸದಸ್ಯರು ಇಡೀ ರಾಜ್ಯದಲ್ಲಿ ಈ ಸಮಸ್ಯೆ ಇದೆ. ಏಕರೂಪ ನೀತಿ ಜಾರಿಗೆ ತನ್ನಿ ಎಂದು ಒತ್ತಾಯಿಸಿದರು. ಆಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ರಮೇಶ್‌ಕುಮಾರ್ ಸಭಾಧ್ಯಕ್ಷರಿಗೆ ವಿಶೇಷ ಅಧಿಕಾರ ಇದೆ. ಏಕರೂಪ ನೀತಿ ತರಲು ಸರ್ಕಾರಕ್ಕೆ ಸೂಚನೆ ನೀಡಲು ಹೇಳಬಹುದು ಎಂದರು. ಆಗ ಸಭಾಧ್ಯಕ್ಷರು ಸಚಿವರೇ ಇನ್ನು ೧೫ ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೂ ಇಡೀ ರಾಜ್ಯಾದ್ಯಂತ ಸಮಸ್ಯೆ ಇರುವುದರಿಂದ ಇದನ್ನು ಬಗೆಹರಿಸಿ ಎಂದ ಸೂಚನೆ ನೀಡಿವುದಾಗಿ ಹೇಳಿದರು. ಇದಕ್ಕೂ ಮೊದಲು ರಘುಪತಿ ಭಟ್ ಅವರ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ರವರ ಪರವಾಗಿ ಉತ್ತರ ನೀಡಿದ್ದ ಸಚಿವ ಶಿವರಾಮ್ ಹೆಬ್ಬಾರ್, ಇನ್ ೧೫ ದಿನಗಳಲ್ಲಿ ಉಡುಪಿ ವ್ಯಾಪ್ತಿಗೂ ಶಿವಮೊಗ್ಗ ಮತ್ತು ಮಂಗಳೂರು ಮಾದರಿಯಲ್ಲೇ ಭೂಪರಿವರ್ತನೆಗೆ ಆದೇಶ ಹೊರಡಿಸುವ ಭರವಸೆಯನ್ನು ನೀಡಿದ್ದರು. ಕೆಳ ಹಂತದಲ್ಲೇ ಭೂಪರಿವರ್ತನೆ ತೀರ್ಮಾನ ಆದೇಶ ಹೊರಡಿಸುತ್ತೇವೆ. ನಗರಾಭಿವೃದ್ಧಿ ಸಚಿವರಿಗೆ ಈ ವಿಷಯವನ್ನು ಗಮನಕ್ಕೆ ತಂದು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದರು.