ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಎಂ ವೀರನಗೌಡ ಪೋತ್ನಾಳ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ

ಮಾನ್ವಿ.ಏ.ತಾಲೂಕಿನ ಪೋತ್ನಾಳ ಭಾಗದ ಹಿರಿಯ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಎಂ.ವೀರನಗೌಡ ಪೋತ್ನಾಳ ವಕೀಲರು ಇವರು ತಮ್ಮ ವೈಯಕ್ತಿಕ ಕೆಲಸದ ಒತ್ತಡದಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್ ಇವರಿಗೆ ಸಲ್ಲಿಸಿದ್ದಾರೆ.
ನಂತರ ಮಾತಾನಾಡಿದ ಅವರು ನಾನು ಹಾಗೂ ನನ್ನ ಸಹೋದರ ಎಂ.ಮಲ್ಲಿಕಾರ್ಜುನ ಕಳೆದ ಏಳು ವರ್ಷಗಳ ಹಿಂದೆ ಹಿರಿಯ ಕಾಂಗ್ರೆಸ್ ನಾಯಕರಾದ ಎನ್.ಎಸ್. ಬೋಸರಾಜ, ರವಿ ಬೋಸರಾಜ, ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಸಾಹುಕಾರ್ ಇವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಪಕ್ಷದ ಅನೇಕ ಚುನಾವಣೆಯಲ್ಲಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅತ್ಯುತ್ತಮವಾಗಿ ಪಕ್ಷ ನೀಡಿದ ಕೆಲಸವನ್ನು ಬಹಳ ನಿಷ್ಟೆಯಿಂದ ನಿರ್ವಹಣೆ ಮಾಡಿದ್ದೇವೆ ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಲು ಆಗದ ಕಾರಣದಿಂದ ರಾಜೀನಾಮೆಯನ್ನು ನೀಡುತ್ತಿದ್ದೇನೆ ಇಲ್ಲಿಯವರೆಗೆ ಪಕ್ಷದ ಚಟುವಟಿಕೆಗಳಲ್ಲಿ ಸಹಕಾರ ನೀಡಿದ ಹಿರಿಯ ಕಿರಿಯ ಆತ್ಮೀಯ ಹಾಗೂ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳು ಎಂದರು.