ಭೂ ಕುಸಿತ: ಅಪಾಯದಂಚಿನಲ್ಲಿ ಮೂರು ಮನೆಗಳು


ಪುತ್ತೂರು: ಭಾರೀ ಮಳೆಗೆ ಗುಡ್ಡ ಕುಸಿತವಾದ ಘಟನೆ ಪುತ್ತೂರಿನ ಎಪಿಎಂಸಿಗೆ ತೆರಳುವ ರಸ್ತೆಯ ರೈಲ್ವೆ ಟ್ರಾಕ್ ಬಳಿಯ ಹೆಬ್ಬಾರಬೈಲು ಎಂಬಲ್ಲಿ ನಡೆದಿದೆ.
ಕಳೆದ ೧೨ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಊ ಗುಡ್ಡ ಕುಸಿತ ಉಂಟಾಗಿದ್ದು, ಇಲ್ಲಿನ ಮಹಮ್ಮದ್ ಶರೀಫ್, ಜಾರ್ಜ್ ಮತ್ತು ಯೋಗೀಶ್ ರವರ ಮನೆಗಳು ಅಪಾಯದ ಸ್ಥಿತಿಯಲ್ಲಿದೆ.
ಮಹಮ್ಮದ್ ಶರೀಫ್ ರವರ ಮನೆಯ ನೀರಿನ ಟ್ಯಾಂಕ್ ಮತ್ತು ಮನೆಯ ಫಿಲ್ಲರ್ ಕೂಡ ಕುಸಿದು ಬಿದಿದ್ದು, ಹೀಗೆಯೇ ಮಳೆ ಮುಂದುವರೆದರೆ ಎರಡು ದಿನಗಳಲ್ಲಿ ಮನೆಯೂ ಕೂಡ ಜರಿದು ಬೀಳುವ ಸಾಧ್ಯತೆ ಉಂಟಾಗಿದ್ದು, ಮನೆಗಳು ತೀರಾ ಅಪಾಯ ದಂಚಿನಲ್ಲಿದೆ.