ಭೂ ಕಬಳಿಕೆ ಸಿದ್ದಲಿಂಗ ಸ್ವಾಮಿ ವಿರುದ್ಧ ಆರೋಪ

(ಸಂಜೆವಾಣಿ ವಾರ್ತೆ)
ಹುಮನಾಬಾದ್ :ಜ.4:ಪಟ್ಟಣದ ಹೊರವಲಯದ ಕಲ್ಲೂರ ರಸ್ತೆಯ ವೀರಭದ್ರೇಶ್ವರ ದೇವಸ್ಥಾನದ ಸಮಗ್ರ ಬೆಳವಣಿಗೆ ಬಸವತೀರ್ಥ ಮಠದ ಸಿದ್ದಲಿಂಗ ಸ್ವಾಮಿ ತಡೆಯೊಡ್ಡುತ್ತಿದ್ದಾರೆ ಎಂದು ಮುಖಂಡ ಮಹೇಶ ಅಗಡಿ ಆರೋಪಿಸಿದರು.
ಪಟ್ಟಣದ ಹೊರವಲಯದ ಕಲ್ಲೂರ ರಸ್ತೆಯ ಐತಿಹಾಸಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕರ ಸಭೆ ಉದ್ದೇಶಿಸಿ ಮಾತನಾಡಿದರು.
2003-2004ರಲ್ಲಿ ವೀರಭದ್ರೇಶ್ವರ ದೇವಸ್ಥಾನದ ಸಂಪೂರ್ಣ ಆಸ್ತಿಯನ್ನು ಕಾನೂನು ಬಾಹಿರವಾಗಿ ತಮ್ಮ ಹೆಸರಿನಲ್ಲಿ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ. ದಾಸೋಹ ಕಟ್ಟಡ ನಿರ್ಮಾಣ ಕಾಮಗಾರಿಗೆ ತಡೆಯೊಡ್ಡುತ್ತಿರು ಬಸವತೀರ್ಥ ಮಠದ ಸಿದ್ದಲಿಂಗ ಸ್ವಾಮಿ ವಿರುದ್ಧ ದೇವಸ್ಥಾನ ಉಳಿಸಬೇಕು. ದೇವಸ್ಥಾನದ ಆಸ್ತಿಯನ್ನು ದೇವಸ್ಥಾನದ ಹೆಸರಿಗೆ ನೋಂದಣಿ ಮಾಡಲು ಅಧಿಕಾರಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಯಾವುದೇ ಅಭಿವೃದ್ಧಿ ಕಾರ್ಯ ಸಹಿಸಲಾಗದೇ ಪ್ರಾಚ್ಯ ವಸ್ತು ಮತ್ತು ಪರಂಪರೆ ಇಲಾಖೆ ಬಸವಣ್ಣನ ಗುಡಿ ಬಸವತೀರ್ಥ ದೇವಸ್ಥಾನ ಜೀಣೋದ್ಧಾರಕ್ಕಾಗಿ ಸರಕಾರ ನೀಡಿದ 60 ಲಕ್ಷ ಅನುದಾನದ ಅನುಮೋದನೆ ತಮ್ಮ ಮಠದ ಹೆಸರಿನ ಪತ್ರದ ಮುಖಾಂತರ ಜೀರ್ಣೋದ್ಧಾರ ಕಾರ್ಯವನ್ನು ಕೈಬಿಡುವಂತೆ ಪತ್ರ ಬರೆದಿದ್ದಾರೆ. ಇಂತಹ ಸ್ವಾಮಿಗಳ ವಿರುದ್ಧ ಕಾನೂನು ಸಮರ ನಡೆಸಲು ಸಿದ್ದರಾಗಿದ್ದೆವೆ ಎಂದು ಕೆಂಡಕಾರಿದರು.
ಹುಡಗಿ ಹಿರೇಮಠ ಸಂಸ್ಥಾನ ವಿರುಪಾಕ್ಷ ಶಿವಾಚಾರ್ಯ, ಕಲ್ಲೂರ ಹಿರೇಮಠ ಸಂಸ್ಥಾನ ಮೃತ್ಯಂಜಯ ಸ್ವಾಮಿಜಿ, ಸದಲಾಪೂರ ಸಿದ್ದಲಿಂಗ ಶಿವಾಚಾರ್ಯ, ಬಸವತೀರ್ಥ ಶ್ರೀ ವೀರಭದ್ರೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ನಾಗೇಶ ಕಲ್ಲೂರ, ಚಂದ್ರಕಾತ ಬಿರಾದಾರ, ಬಸವರಾಜ ಕಲ್ಲೂರ್, ಸಂಗಮೇಶ ಬೋರಂಪಳ್ಳಿ, ರಮೇಶ ಕಲ್ಲೂರ, ಭೀಮಶಟ್ಟಿ ಹಣಕುಣಿ, ನೀಲಕಂಠ ಪ್ಯಾಟಿ, ಅಮೃತಪ್ಪ ಪಾಟೀಲ್ ಕಠಳ್ಳಿ, ಚಂದ್ರಕಾಂತ ಜಮಾದಾರ, ಗೋಪಾಲಕೃಷ್ಣ ಮೊಹಾಳೆ, ಗುಂಡಯ್ಯಾ ಸ್ವಾಮಿ, ವಿಜಯಸ್ವಾಮಿ ಪತ್ರಿ ಸೇರಿದಂತೆ ಅನೇಕರಿದ್ದರು.