ಭೂ ಕಬಳಿಕೆ ಆರೋಪ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು
ಶ್ರೀರಾಮುಲುಗೆ ಎಸ್.ಆರ್.ಹಿರೇಮಠ ಒತ್ತಾಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.01: ಅಧಿಕಾರಿಗಳನ್ನು ಬಳಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಠಿಸಿ ಭೂ ಕಬಳಿಕೆ ಆರೋಪವನ್ನು ಎದುರಿಸುತ್ತಿರುವ ಸಚಿವ ಬಿ.ಶ್ರೀರಾಮುಲು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕೆಂದು ಜನಸಂಗ್ರಾಮ ಪರಿಷತ್ತಿನ ಮುಖಂಡ ಎಸ್.ಆರ್.ಹಿರೇಮಠ ಹೇಳಿದ್ದಾರೆ.
ಅವರಿಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ನಗರದ ಟಿ.ಬಿ.ಸ್ಯಾನಿಟೋರಿಯಂ ಬಳಿ ನಡೆಸಿರುವ ಭೂ ಖರೀದಿಯಲ್ಲಿ ಅಕ್ರಮ ಎಸಗಿದ್ದಾರೆ. ಈ ವಿಷಯದಲ್ಲಿ ಪೊಲೀಸರು ತನಿಖೆ ಮಾಡಿ ಸಚಿವರನ್ನು ಆರನೇ ಆರೋಪಿಯಾಗಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಹೀಗಿದ್ದರೂ ಅವರು ಇನ್ನು ಸಚಿವ ಸ್ಥಾನದಲ್ಲಿ ಮುಂದುವರೆದಿರುವುದು ನಾಚಿಕೆಗೇಡಿನ ವಿಷಯ ಎಂದಿದ್ದಾರೆ.
ಗಣಿ ಭಾದಿತ ಪ್ರದೇಶದ ಅಭಿವೃದ್ಧಿಗೆ ಜಸ್ಟಿಸ್ ಸುದರ್ಶನರೆಡ್ಡಿ ನೇತೃತ್ವದಲ್ಲಿ ಕೆ.ಎಂ.ಆರ್.ಸಿ ಹಣ ಬಳಕೆಗೆ ಸಮಿತಿ ರಚಿಸಿದೆ. ಇದನ್ನು ಸಮಾಜ ಪರಿವರ್ತನಾ ಸಮುದಾಯ ಸ್ವಾಗತಿಸಿದೆ. 17 ಸಾವಿರ ಕೋಟಿ ಸಂಗ್ರಹವಾಗುವ ಈ ನಿಧಿಯನ್ನು ಯೋಜನೆಯ ಪೈಸೆ, ಪೈಸೆ ಹಣ ಸದ್ಬಳಕೆ ಆಗಬೇಕೆಂದು ನಮ್ಮ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದೆ. ಯೋಜನೆಯ ಹಣ ಈ ಭಾಗದ ಭಾದಿತ ಜನರ ಸಮಗ್ರ ಮಾನವೀಯ ವಿಕಾಸಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಬಳಕೆಯಾಗಬೇಕು ಅದು ಬಿಟ್ಟು ವಿಮಾನ ನಿಲ್ದಾಣ ಸೇರಿದಂತೆ ಶ್ರೀಮಂತರ ಬಳಕೆಯ ಯೋಜನೆಗಳಿಗೆ ಬಳಸುವ ಹುನ್ನಾರ ನಡೆದಿದೆ ಇದು ಸರಿಯಲ್ಲ ಎಂದರು.

Attachments area