ಭೂ ಒಡೆತನ ಯೋಜನೆ ಪಟ್ಟಿ ತಯಾರಿ ಜಿಲ್ಲಾಧಿಕಾರಿ ತೀವ್ರ ತರಾಟೆ

ರಾಯಚೂರು,ಫೆ.೨೭- ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಅರ್ಜಿ ಸಲ್ಲಿಸಿದ ಆದಿ ಜಾಂಬವ ಫಲಾನುಭವಿಗಳ ಪಟ್ಟಿ ತಯಾರಿ ಕುರಿತು ಜಿಲ್ಲಾಡಳಿತ ಗಮನಕ್ಕೆ ತರದೇ ಡಾ. ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ಎಂ ರವಿ ಅವರು ಫಲಾನುಭವಿಗಳ ಪಟ್ಟಿ ಸಿದ್ದಪಡಿಸಿದಕ್ಕೆ ಸಂಬಂಧಸಿ ಕೆಂಡಮಂಡಲವಾದ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಅವರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಫಲಾನುಭವಿಗಳ ಆಯ್ಕೆ ಪ್ರಗತಿ ಪರಿಶೀಲನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯಾದ್ಯಂತ ಭೂ ಒಡೆತನ ಯೋಜನೆಯಡಿ ಅರ್ಜಿ ಸಲ್ಲಿಸಿದ ತಾಂಡಾ, ಆದಿ ಜಾಂಬವ ಹಾಗೂ ಭೋವಿ ಸಮುದಾಯಗಳ ಪಟ್ಟಿಯನ್ನು ನಿಗದಿತ ಪಟ್ಟಿಗಿಂತ ೨೪೦ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾಡಳಿತ ಗಮನಕ್ಕೆ ತರದೇ ಏಕಾಏಕಿ ಸಿದ್ದಪಡಿಸಿದಕ್ಕೆ ಆಕ್ರೋಶಗೊಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ನನ್ನ ಗಮನಕ್ಕೆ ತರದೇ ಪಟ್ಟಿ ಸಿದ್ದಪಡಿಸಿರಿವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಕಡತಗಳನ್ನು ಬಿಸಿಡಿ ಸಭೆಯಿಂದ ಹೊರ ನಡೆದರು. ಕಡತಗಳನ್ನು ಪರಿಶೀಲನೆ ಮಾಡುವುದಿಲ್ಲ ಎಂದು ಖಡಕ್ ಸೂಚನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ವಿವಿಧ ನಿಗಮಗಳ ಮೂಲಕ ಭೂ ಒಡೆತನ ಯೋಜನೆಯಡಿ ಜಮೀನು ಖರೀದಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂರಹಿತ ಮಹಿಳೆಯರಿಗೆ ಹಂಚಿಕೆ ಮಾಡಲಾಗುತ್ತದೆ.೧೫ ಲಕ್ಷದ ವೆಚ್ಚದಲ್ಲಿ ಎರಡು ಎಕರೆ ಜಮೀನು ಖರೀದಿಸಿ, ಫಲಾನುಭವಿಗೆ ಹಂಚಿಕೆ ಮಾಡಲಾಗುತ್ತದೆ. ಶೇ ೫೦ರಷ್ಟನ್ನು ಸಹಾಯಧನದ ರೂಪದಲ್ಲಿ ಹಾಗೂ ಶೇ ೫೦ ರಷ್ಟನ್ನು ಶೇ ೬ರ ಬಡ್ಡಿ ದರದಲ್ಲಿ ೧೦ ವರ್ಷಗಳ ಅವಧಿಯ ಸಾಲವಾಗಿ ಮಂಜೂರು ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪುತ್ತೇದಾರ, ತಹಸೀಲ್ದಾರ್ ರಾಜಶೇಖರ,ಬಿ, ಫಲಾನುಭವಿಗಳು, ಭೂ ಮಾಲೀಕರು ಸೇರಿದಂತೆ ಉಪಸ್ಥಿತರಿದ್ದರು.