ಮಾನ್ವಿ,ಜೂ.೧೫-
ಅಕ್ರಮ ಭೂ ಒಡೆತನದ ದಲ್ಲಾಳಿ ಹಾಗೂ ಸಹಕಾರ ಮಾಡುವ ಅಧಿಕಾರಿಗಳಿ ವಿರುದ್ಧ ಹಾಗೂ ಪುರಸಭಾ ಮಳಿಗೆ ಹಂಚಿಕೆ ವಿಚಾರದಲ್ಲಿ ಮೀನಮೇಷಾ ಮಾಡುತ್ತಿರುವ ಪುರಸಭಾ ಅಧಿಕಾರಿ, ಸಹಾಯಕ ಆಯುಕ್ತರ ವಿರುದ್ಧ ಜೂನ್ ೧೯ ರಂದು ಶಾಸಕರ ಭವನದ ಮುಂಭಾಗದಲ್ಲಿ ಸುತ್ತಲೂ ಬೆಂಕಿಯೊಂದಿಗೆ ಅಮರಣಾಂತ ಉಪವಾಸ ಮಾಡಲಾಗುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟದಿಂದ ೧೭೯ ದಿನದ ಹೋರಾಟದಲ್ಲಿ ಅಧ್ಯಕ್ಷ ಪ್ರಭುರಾಜ್ ಕೊಡ್ಲಿ ಹೇಳಿದರು.
ಪಟ್ಟಣದ ಶಾಸಕರ ಭವನದ ಮುಂಭಾಗದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಮಾತಾನಾಡಿದ ಅವರು ಪ್ರಮುಖವಾಗಿ ನಮ್ಮ ಬೇಡಿಕೆಗಳಾಗಿರುವ ಭೂ ಒಡೆತನ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಭೂ ಭೂ ಪರಭಾರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿ ಎಸ್ ಸಿ ಎಸ್ ಟಿ ಕುಟುಂಬಗಳ ಭೂಮಿಯನ್ನು ಖರೀದಿ ಮಾಡಿದ ದಲ್ಲಾಳಿಗಳ ವಿರುದ್ಧ ಹಾಗೂ ಸಂಬಂಧಿಸಿದೆ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಭೂಮಿಯನ್ನು ವಶಪಡಿಸಿಕೊಳ್ಳಬೇಕು, ಪುರಸಭೆ ಮಳಿಗೆಗಳನ್ನು ಹರಾಜಿನಲ್ಲಿ ಪಡೆದುಕೊಂಡ ಹರಾಜುದಾರರಿಗೆ ಕೂಡಲೇ ಮಳಿಗೆಗಳನ್ನು ನೀಡಬೇಕು ಎಂದು ನೂತನ ಸಚಿವ ಎನ್ ಎಸ್ ಬೋಸರಾಜ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುತ್ತದೆ ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ಸಂಘಟನೆಯಿಂದ ಉಗ್ರ ಸ್ವರೂಪದ ಹೋರಾಟವನ್ನು ರೂಪಿಸಲಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಪ್ರಭುರಾಜ ಕೊಡ್ಲಿ , ಶಾನವಾಜ್, ಮೌನೇಶ ನಾಯಕ, ಮೈನೋದ್ದಿನಿ, ಎಂ, ಡಿ ಜೀನ್ನು ಮ, ಟಿಪ್ಪುಸುಲ್ತಾನ್, ಪಂಪಾಪತಿ, ಸಬೀರ್ ಪಾಷ, ಫರಿಕ್ ಇನ್ನಿತರರು ಇದ್ದರು.