ಭೂ ಒಡೆತನದಲ್ಲಿ ಅಕ್ರಮ, ದಲ್ಲಾಳಿಗಳ ವಿರುದ್ಧ ನಿರಂತರ ಹೋರಾಟ

ಮಾನ್ವಿ,ಮೇ.೨೬-
ಭೂ ಒಡೆತನ ಯೋಜನೆಯೂ ದಲ್ಲಾಳಿಗಳ ಮಧ್ಯಸ್ಥಿಕೆಯಿಂದ ಬಡವರಿಗೆ ತಲುಪಬೇಕಾಗಿದ್ದ ಭೂಮಿಯೂ ಇಂದಿಗೂ ತಲುಪಿಲ್ಲ ಹಾಗೂ ತಲುಪಿದರೂ ಬಿತ್ತನೆಗೆ ಪ್ರಯೋಜನಕ್ಕೆ ಬಾರದೆ ಇರುವಂತಹ ಭೂಮಿಯನ್ನು ಹಂಚಿಕೆ ಮಾಡಿದ ದಲ್ಲಾಳಿಗಳ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಲು ಜನಶಕ್ತಿ ಕೇಂದ್ರ ಸಂಘಟನೆಯಿಂದ ಶಾಸಕರ ಭವನದ ಮುಂಭಾಗದಲ್ಲಿ ಕಳೆದ ೧೫೮ ದಿನಕ್ಕೆ ಕಾಲಿಟ್ಟಿದೆ ಎಂದು ಅಧ್ಯಕ್ಷ ಪ್ರಭುರಾಜ ಕೊಡ್ಲಿ ಹೇಳಿದರು..
ಪ್ರಮುಖವಾಗಿ ನಮ್ಮ ಬೇಡಿಕೆಗಳಾಗಿರುವ ಭೂ ಒಡೆತನ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಭೂ ಭೂ ಪರಭಾರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿ ಎಸ್‌ಸಿಎಸ್‌ಟಿ ಕುಟುಂಬಗಳ ಭೂಮಿಯನ್ನು ಖರೀದಿ ಮಾಡಿದ ದಲ್ಲಾಳಿಗಳ ವಿರುದ್ಧ ಹಾಗೂ ಸಂಬಂಧಿಸಿದೆ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಭೂಮಿಯನ್ನು ವಶಪಡಿಸಿಕೊಳ್ಳಬೇಕು, ಪುರಸಭೆ ಮಳಿಗೆಗಳನ್ನು ಹರಾಜಿನಲ್ಲಿ ಪಡೆದುಕೊಂಡ ಹರಾಜುದಾರರಿಗೆ ಕೂಡಲೇ ಮಳಿಗೆಗಳನ್ನು ನೀಡಬೇಕು, ಮಾನ್ವಿ ಲೋಕೋಪಯೋಗಿ ಉಪ ವಿಭಾಗದ ಅಧಿಕಾರಿಗಳು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅನುದಾನ ದುರುಪಯೋಗವಾದ ಬಗ್ಗೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಬೇಕು, ಅಕ್ರಮ ಕೊಲ್ಲುಗಣಿಗಾರಿಕೆ ತಡೆಯಬೇಕು, ೨೦೨೨ ೨೩ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆ ಬಿಓಸಿಎನ್ ಯಾವುದೇ ಕಾಮಗಾರಿ ಮಾಡದೆ ಹಣ ಪಡೆದಿರುವ ವೆಂಡರ್ಗಳ ಮೇಲೆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇನ್ನಿತರ ಬೇಡಿಕೆಗಳನ್ನು ಈಡೇರಿಸಿದ ಹೋದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಬೀಗ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳಿಗೆ ಮನವಿ ಮತ್ತು ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಈ ಸಂದರ್ಭದಲ್ಲಿ ಜಿಲ್ಲಾ ಆಡಳಿತಕ್ಕೆ ಎಚ್ಚರಿಕೆ ಮತ್ತು ಮನವಿಯನ್ನ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆ ಮುಖಂಡರುಗಳಾದ ಜಯರಾಜ್ ಕೊಡ್ಲಿ ಎಲಿಯಸ್ ಕನ್ನಡಿಗ ರಾಮಣ್ಣ ಸಂಗಾಪುರ್ ಗವಿಗಟ್ಟು ಬಸಪ್ಪ ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.