ಭೂಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ ಕುರುಗೋಡಿನಲ್ಲಿ ರಸ್ತೆತಡೆ

ಕುರುಗೋಡು, ನ.5: ಪಟ್ಟಣದ ಮುಖ್ಯ ವೃತ್ತದಲ್ಲಿ ಭೂಸುಧಾರಣಾ ಕಾಯಿದೆ ತಿದ್ದುಪಡಿ, ವಿದ್ಯುತ್‍ತಿದ್ದುಪಡಿ, ಕೇಂದ್ರ ಕೃಷಿಕಾಯಿದೆಗಳ ತಿದ್ದುಪಡಿ ವಿರೋದಿಸಿ ಅಖಿಲಭಾರತ ರೈತಸಂಘರ್ಷ ಸಮನ್ವಯ ಸಮಿತಿ ಕುರುಗೊಡು ತಾಲೂಕು ಸಮಿತಿ ನೇತೃತ್ವದಲ್ಲಿ ಗುರುವಾರ ನೂರಾರು ಮಂದಿ ಕಾರ್ಯಕರ್ತರು ರಸ್ತೆತಡೆನಡೆಸಿದರು. ರಸ್ತೆ ತಡೆಯಿಂದ ಒಂದು ಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು.
ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಗಾಳಿಬಸವರಾಜ್ ಮಾತನಾಡಿ, ಕೇಂದ್ರ ಹಾಗು ರಾಜ್ಯಸರ್ಕಾರಗಳು ರೈತವಿರೋದಿನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿ ಕುರುಗೋಡು ತಾಲೂಕು ಅದ್ಯಕ್ಷ ಈಶ್ವರ ಮಾತನಾಡಿ, ನಮ್ಮನ್ನಾಳುವ ಸರ್ಕಾರಗಳು ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಅರಿವಿಲ್ಲದೆ ರೈತ, ಕಾರ್ಮಿಕ ನೀತಿಗಳನ್ನು ಗಾಳಿಗೆ ತೂರಿ ಭೂಸುಧಾರಣಾ ಕಾಯಿದೆಯನ್ನು ಜಾರಿಮಾಡಲು ಹೊರಟಿರುವ ಕ್ರಮ ಸರಿಯಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಬೀದಿ ಬದಿ ವ್ಯಾಪಾರಿ ಸಂಘದ ಅದ್ಯಕ್ಷ ವಿಶ್ವನಾಥಸ್ವಾಮಿ ಮಾತನಾಡಿ, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕೇಂದ್ರ ಕೃಷಿಕಾಯಿದೆಗಳ ತಿದ್ದುಪಡಿ ವಾಪಾಸುಆಗುವವರಿಗೆ ಹೋರಾಟ ಮುಂದುವರಿಯುತ್ತಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಹಮಾಲಿಸಂಘದ ಅದ್ಯಕ್ಷ ಎನ್.ಸೋಮಪ್ಪ, ಕೂಲಿಕಾರಸಂಘದ ಅದ್ಯಕ್ಷ ಎ.ಮಂಜುನಾಥ, ದಲಿತಹಕ್ಕುಗಳ ಸಮಿತಿ ಕೆಂಚಪ್ಪ, ದೇವದಾಸಿ ಮಹಿಳಾ ಸಂಘದ ಯಂಕಮ್ಮ, ಪೇಂಟರ್‍ನಾಗಪ್ಪ, ಹುಲುಗಪ್ಪ, ಅಂಬಣ್ಣ, ಆಟೋ ಈರೇಶ, ಮಲ್ಲಿಕಾರ್ಜುನ, ರಾಮಲಿಂಗ ಜಡಿಯಪ್ಪ, ತಿಮ್ಮಪ್ಪ,ಗೂಡುವಲಿ, ತಂಬೂರಿಸಿದ್ದಯ್ಯ, ಕಟ್ಟೇಗೌಡ, ಬಸವರಾಜ್ ಸೇರಿದಂತೆ ಇತರೆ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಇದ್ದರು. ಕುರುಗೋಡು ಪೋಲೀಸರು ರಸ್ತೆತಡೆಗೆ ಬಿಗಿಭದ್ರತೆ ಒದಗಿಸಿದ್ದರು.