ಭೂಷಣ ಪ್ರಶಸ್ತಿ, ಸಾವಿನ ಸಂಖ್ಯೆ ಏರಿಕೆ

ಮುಂಬೈ,.ಏ.೧೭-ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಸಮಾರಂಭದಲ್ಲಿ ಉಂಟಾದ ಬಿಸಿಗಾಳಿ ಹೊಡೆತ ಮತ್ತು ನಿರ್ಜಲೀಕರಣಕ್ಕೆ ಸಿಕ್ಕಿ ಮೃತಪಟ್ಟವರ ಸಂಖ್ಯೆ ೧೧ಕ್ಕೆ ಏರಿಕೆಯಾಗಿದೆ.
ಸಾಮಾಜಿಕ ಕಾರ್ಯಕರ್ತ ದತ್ತಾ ತ್ರೇಯ ನಾರಾಯಣ್ ಅಲಿಯಾಸ್ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ದುರ್ಘಟನೆ ನಡೆದಿದೆ.
ಕಾರ್ಯಕ್ರಮದ ಸಂದರ್ಭದಲ್ಲಿ ೧೨೦ ಕ್ಕೂ ಹೆಚ್ಚು ಜನರು ನಿರ್ಜಲೀಕರಣ, ಸೂರ್ಯನ ಬೆಳಕಿನ ಶಾಖಕ್ಕೆ ಸಿಲುಕಿ ಸಮಸ್ಯೆ ಎದುರಿಸಿದ್ದಾರೆ. ಅದರಲ್ಲಿ ೧೧ ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ಷಾಂತರ ಜನರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಅವಗಢ ಸಂಬಂಧಿಸಿದ್ದು ಬಿಸಿ ಗಾಳಿಯಿಂದ ಉಂಟಾದ ಸಮಸ್ಯೆಯಿಂದ ತತ್ತರಿಸಿದ ೧೦೦ ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದe.
ಅಸ್ವಸ್ಥಗೊಂಡ ೧೩ ಮಂದಿಯನ್ನು ಹತ್ತಿರದ ಹಲವು ಆಸ್ಪತ್ರೆಗೆ ದಾಖಲಾಗಿದೆ.ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಖಾರ್ಘರ್‌ನ ೩೦೬ ಎಕರೆ ವಿಸ್ತಾರವಾದ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಧರ್ಮಾಧಿಕಾರಿಯ ಲಕ್ಷಾಂತರ ಅನುಯಾಯಿಗಳು ಭಾಗವಹಿಸಿದ್ದರು. ಮಹಾರಾಷ್ಟ್ರ ಸರ್ಕಾರ ಸ್ಥಾಪಿಸಿದ ಪ್ರಶಸ್ತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಧರ್ಮಾಧಿಕಾರಿಗೆ ಪ್ರದಾನ ಮಾಡಿದರು.
ಬೆಳಗ್ಗೆಯಿಂದಲೇ ಜನ ಸೇರಲು ಆರಂಭಿಸಿದ ಕಾರ್ಯಕ್ರಮ ಬೆಳಗ್ಗೆ ೧೧.೩೦ರ ಸುಮಾರಿಗೆ ಆರಂಭವಾಗಿ ಮಧ್ಯಾಹ್ನ ೧ ಗಂಟೆವರೆಗೆ ನಡೆಯಿತು
ಮೈದಾನದಲ್ಲಿ ಜನರು ತುಂಬಿ ತುಳುಕುತ್ತಿದ್ದರು.ಇದರ ಪರಿಣಾಮ ಸಮಸ್ಯೆ ಎದುರಿಸುವಂತಾಗಿದೆ.
ಈ ಸಂದರ್ಭದಲ್ಲಿ ಒಟ್ಟು ೧೨೩ ಜನರು ನಿರ್ಜಲೀಕರಣದಂತಹ ಶಾಖ-ಸಂಬಂಧಿತ ಆರೋಗ್ಯ ಕಾಯಿಲೆಗಳಿಗಳಿಗೆ ಸಿಲುಕಿ ಸಮಸ್ಯೆ ಎದುರಿಸಿದ್ದಾರೆ ತಕ್ಷಣವೇ ಸ್ಥಳದಲ್ಲಿ ಸ್ಥಾಪಿಸಲಾದ ೩೦ ವೈದ್ಯಕೀಯ ಬೂತ್‌ಗಳಿಗೆ ಉಲ್ಲೇಖಿಸಲಾಯಿತು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ೧೩ ರೋಗಿಗಳನ್ನು ಬೇರೆ ಬೇರೆ ಖಾಸಗಿಗೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಗಳು ಮತ್ತು ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ” ಎಂದು ಕಂದಾಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ