ಭೂಷಣಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕದಾಸ ಜಯಂತಿ, ‘ಅನ್ವಯಿಕ’ ಬಿಡುಗಡೆ

ಕಲಬುರಗಿ,ಡಿ.1:ಕಮಲಾಪುರ ತಾಲೂಕಿನ ಭೂಷಣಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಭಕ್ತ ಕನಕದಾಸರ 536ನೇ ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ವಿಜ್ಞಾನ ಶಿಕ್ಷಕ ಮಲ್ಲಿಕಾರ್ಜುನ ಎಸ್.ಸಿರಸಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ‘ಅನ್ವಯಿಕ’ ಎಂಬ ವಿಜ್ಞಾನ ಮತ್ತು ಗಣಿತ ವಿಷಯಗಳುಳ್ಳ ನೂತನ ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಅರ್ಜುನ ಹತ್ತಿ, ಮಸ್ತಾನ್ ಸಾಬ್, ಲಕ್ಷ್ಮೀಕಾಂತ ಮೇತ್ರಿ, ಪ್ರವೀಣ, ಉಷಾ ಗೊಬ್ಬೂರ್, ತುಕಾರಾಮ ಸೂರ್ಯವಂಶಿ, ಹನುಮಂತರಾವ ನಾಗೂರ, ಸುಮಿತಾದೇವಿ ವಗ್ಗೆ, ಸೋಮಶೇಖರ ಮರಪಳ್ಳಿ, ಜಗನಾಥ ರಾಯಕೋಡ್, ‘ಅನ್ವಯಿಕ್’ನ ಪ್ರಧಾನ ಸಂಪಾದಕ ಮಲ್ಲಿಕಾರ್ಜುನ ಎಸ್.ಸಿರಸಗಿ ಸೇರಿದಂತೆ ಮತ್ತಿತರರಿದ್ದರು.