ಭೂವಿಜ್ಞಾನಿ ಅಧಿಕಾರಿ ವಿಶ್ವನಾಥ ಅಮಾನತ್ತಿಗೆ ಒತ್ತಾಯ

ರಾಯಚೂರು,ಏ.೮- ಹಿರಿಯ ಭೂವಿಜ್ಞಾನಿ ಅಧಿಕಾರಿ ಹಾಗೂ ಫೀಲ್ಡ್ ವರ್ಕರ್ ರನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಿ ಲಿಜೆಂಡ್ ಟಿಪ್ಪು ಸುಲ್ತಾನ್ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲೂಕಿನ ವಡವಾಟಿ ಗ್ರಾಮದಲ್ಲಿ ಯಾವುದೇ ರಾಯಲ್ಟಿ ನೀಡದೇ ಮೊರಂ ಸಾಗಿಸುತ್ತಿರುವ ಬಗ್ಗೆ ಹಿರಿಯ ಭೂ ವಿಜ್ಞಾನಿ ಇಲಾಖೆ ಇವರಿಗೆ ದೂರನ್ನು ಸಲ್ಲಿಸಿದ್ದು ಸದರಿ ಅಧಿಕಾರಿಗಳು ನಮಗೆ ಸದರಿ ಕೌರಿಗಳು ನಮ್ಮ ಇಲಾಖೆಯಿಂದ ಪರವಾನಿಗೆ ತೆಗೆದುಕೊಂಡಿರುವುದಿಲ್ಲ ಎಂದು ತಿಳಿಸಿದ್ದು. ಸಹಾಯಕ ಆಯುಕ್ತರು ದೂರನ್ನು ಸಲ್ಲಿಸಿರುತ್ತೇವೆ . ಸಹಾಯಕ ಆಯುಕ್ತರು ಮೈನ್ಸ್ ಅಧಿಕಾರಿ ಮಂಜುನಾಥ ಇವರಿಗೆ ದೂರವಾಣಿ ಕರೆ ಮಾಡಿ ಸದರಿ ಕೌರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿರುತ್ತಾರೆ.ಆದರೆ ಎಸ್.ಜಿ.ಓ. ವಿಶ್ವನಾಥ , ಫೀಲ್ ಆಫೀಸರ್ ಮಂಜುನಾಥ ಇವರುಗಳು ಅನಧಿಕೃತವಾಗಿ ಮೊರಂ ಸಾಗಾಣಿಕೆ ಮಾಡುವ ಕೌರಿಗಳೊಂದಿಗೆ ಶಾಮೀಲಾಗಿದ್ದು , ಸದರಿ ಅಧಿಕಾರಿಗಳು ಕೌರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.
ಸದರಿ ಅಧಿಕಾರಿಗಳನ್ನು ವಿಚಾರಿಸಿದಾಗ ನಾವು ಒಬ್ಬರೇ ಯಾವುದೇ ಕ್ರಮ ಕೈಗೊಳ್ಳಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ . ಈ ಅಕ್ರಮದ ಬಗ್ಗೆ ಹಿರಿಯ ಭೂ ವಿಜ್ಞಾನಿ ಅಧಿಕಾರಿ ಹಾಗೂ ತಹಶೀಲ್ದಾರ, ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ.ಆದ್ದರಿಂದ ಹಿರಿಯ ಭೂ ವಿಜ್ಞಾನಿ ಅಧಿಕಾರಿಗಳು ವಿಶ್ವನಾಥ ಹಾಗೂ ಫೀಲ್ಡ್ ಆಫೀಸರ್ ಮಂಜುನಾಥ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಇವರನ್ನು ಕೂಡಲೇ ಸೇವೆಯಿಂದ ಅಮಾನತ್ತು ಗೋಳಿಸಬೇಕು ಹಾಗೂ ಮೊರಂ ಸಾಗಾಣಿಕೆ ಮಾಡುತ್ತಿರುವ ಕೌರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಸೈಯದ್ ರಶೀದ್,ಸೇರಿದಂತೆ ಇತರರು ಇದ್ದರು.