ಭೂಮಿ ಹಕ್ಕಿಗಾಗಿ ಪ್ರಾಂತ ರೈತಸಂಘದ ಮನವಿ.


ಸಂಜೆವಾಣಿ ವಾರ್ತೆ
ಹೊಸಪೇಟೆ ಜು:23 ರಾಜ್ಯದ ರೈತರ ಭೂಮಿ ಹಕ್ಕು ಮತ್ತು ರೈತರ ಬವಣೆಗಳನ್ನು ನೀಗಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಕೃಷಿ ಬಿಕ್ಕಟ್ಟು ತೀವ್ರವಾಗಿದೆ. ರಾಜ್ಯ ಸರಕಾರದ ಪ್ರತಿಯೊಂದು ಕ್ರಮಗಳು, ತೀರ್ಮಾನಗಳು ಹಾಗೂ ಕಾಯ್ದೆಗಳು 58 ಕೃಷಿ ಬಿಕ್ಕಟ್ಟನ್ನು ತೀವ್ರಗೊಳಿಸುವ ಉದ್ದೇಶವನ್ನು ಹೊಂದಿರುವುದು ದುರದೃಷ್ಟಕರವಾಗಿದೆ. ರೈತರ ಐತಿಹಾಸಿಕ ಹೋರಾಟದ ಫಲವಾಗಿ ಕೇಂದ್ರ ಸರಕಾರ ತನ್ನ ಕರಾಳ ಕೃಷಿ ಕಾಯ್ದೆಗಳನ್ನು ರದ್ದು ಮಾಡಿದೆ. ರಾಜ್ಯ ಸರಕಾರ. ಇಂತಹದೇ ಕರಾಳ ಕೃಷಿ ಕಾಯ್ದೆಗಳಾದ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾನೂನು, ಎಪಿಎಂಸಿ ತಿದ್ದುಪಡಿ ಕಾನೂನು, ಕರ್ನಾಟಕ ಜಾನುವಾರು ಸಂರಕ್ಷಣಾ ಹಾಗೂ ಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸದೇ ಉಳಿಸಿಕೊಂಡಿದೆ. ಇದರಿಂದ ರಾಜ್ಯದ ಗ್ರಾಮೀಣ ಸಮುವಾಯಕ್ಕೆ ಮಾಡಿರುವ ಮಹಾನ್ ದ್ರೋಹವಾಗಿದೆ. ರೈತರೇ ದೇಶದ ಬೆನ್ನೆಲುಬು, ಉಳುವವನಿಗೆ ಭೂಮಿ ಮುಂತಾದ ಘೋಷಣೆಗಳನ್ನು ಬದಲಿಸಿ ಬಂಡವಾಳಶಾಹಿಗಳೇ ದೇಶದ ಬೆನ್ನೆಲುಬು ಎನ್ನುವ ನೀತಿಯಲ್ಲಿ ಸರಕಾರ ಸಾಗುತ್ತಿದೆ. ಇತ್ತೀಚೆಗೆ ಕಂದಾಯ ಸಚಿವ ಆಶೋಕ್ ಅವರು ರಾಜ್ಯದಲ್ಲಿ ಇನ್ನು ಮುಂದೆ ಬಗರ್ ಹುಕಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಕೂಡಲೇ ಈ ಹೇಳಿಕೆಯನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೂಡಲೇ ವಿತರಿಸಿದರು. ಸರಕಾರಿ ಜಮೀನುಗಳಲ್ಲಿ ರೈತರಿಗೆ ಹಕ್ಕುಪತ್ರ ನೀಡದೇ ಗುತ್ತಿಗೆ ನೀಡುª ಕ್ರಮ ಹಿಂಪಡೆಯಬೇಕು. ಚೆನ್ನೈ-ಬೆಂಗಳೂರು, ಬೆಂಗಳೂರು ಮುಂಬೈ ಕೈಗಾರಿಕಾ ಕಾರಿಡಾರ್ ಹೆಸರಿನಲ್ಲಿ ಮತ್ತಿತರೆ ಅಭಿವೃದ್ಧಿ ಹೆಸರಿನಲ್ಲಿ ಬಲವಂತವಾಗಿ ಭೂಸ್ವಾದಿನ ಮಾಡುವುದು ನಿಲ್ಲಬೇಕು. ರಾಜ್ಯದಲ್ಲಿ ನಿವೇಶನ ರಹಿತರನ್ನು ಗಣತಿ ಮಾಡಿ ನಿವೇಶನ ಸಹಿತ ಮನೆ ನಿರ್ಮಿಸಿಕೊಡಬೇಕು. ಹಾಗೂ ಇತರೆ ಬೆಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಜಿ.ಕೆರೆಹನುಮ, ಕಾರ್ಯದರ್ಶಿ ಯಲ್ಲಲಿಂಗ, ಯು.ಬಸವರಾಜ್, ಮಾಳಮ್ಮ, ಬಿ.ರಮೇಶ್, ಜಿ.ತಾರನಾಥ, ಎ.ಸ್ವಾಮಿ, ರುದ್ರಪ್ಪ, ಎಂ.ರಾಘವೇಂದ್ರ ಮತ್ತಿತರರಿದ್ದರು.