ಭೂಮಿ ಸಮಾಜದ ಸಂಘಟನಾ ಸಭೆ

ನವಲಗುಂದ.ಡಿ.25: ಈಗಾಗಲೆ ಭೋವಿ ಸಮಾಜದವರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸುವದು, ಯಾವುದೇ ಸಮಸ್ಯೆಗಳಿದ್ದರೂ ನಾನು ತಮ್ಮ ಸಮಾಜದ ಪರವಾಗಿ ಸದಾ ಇರುತ್ತೇನೆ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಪಟ್ಟಣದ ಗವಿಮಠ ಕಲ್ಯಾಣ ಮಂಟಪದಲ್ಲಿ ಭೋವಿ ಸಮಾಜದ ರಾಜ್ಯ ಮಟ್ಟದ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಭೋವಿ ಸಮಾಜದ ಯಾವುದೇ ಸಮಸ್ಯೆಗಳು ಇದ್ದಲ್ಲಿ ನೇರವಾಗಿ ನನ್ನನ್ನು ಭೇಟಿ ಮಾಡಿ ನಿಮ್ಮೆಲ್ಲ ಕೆಲಸ ಕಾರ್ಯಗಳನ್ನು ಮಾಡುವುದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷರು ಸಾಯಿಬಣ್ಣ ಭೋವಿ, ಲಕ್ಷ್ಮಣ ಭೋವಿ, ಮಹೇಶ ಒಡೆಯರ ವಿಜಯಪೂರ ಮಹಾನಗರ ಪಾಲಿಕೆ ಸದಸ್ಯರು, ಶಿವರಾವ್ ಭೋವಿ, ಹುಚ್ಚಪ್ಪ ಭೋವಿ, ಶೈಲೇಂದ್ರ ಭೋವಿ, ಬೇಲೂರಪ್ಪ ಭೋವಿ, ರಮೇಶ ಭೋವಿ, ಹುಲಗಪ್ಪ ಭೋವಿ, ನಾಗಪ್ಪ ಭೋವಿ, ಸಿದ್ರಾಮ ಭೋವಿ, ಮಹಾಂತೇಶ ಭೋವಿ, ಯಲ್ಲಪ್ಪ ಭೋವಿ, ಡಾ.ರವೀಂದ್ರ ಬೊವೇರ, ಕುಶೋರ ಬಿಬತೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.