ಭೂಮಿ, ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆ

filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ಕೊರಟಗೆರೆ, ಜೂ. ೮- ವಿಶ್ವ ಪರಿಸರ ದಿನಾಚರಣೆಯ ದಿನದಂದು ಗಿಡಗಳನ್ನು ನೆಟ್ಟು ವರ್ಷವಿಡಿ ಬೆಳೆಸಿ ಪೋಷಿಸಿ ಭೂಮಿಯ ಪ್ರಕೃತಿಯನ್ನು ಕಾಪಾಡಬೇಕು ಎಂದು ತಹಶೀಲ್ದಾರ್ ಮಂಜುನಾಥ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ, ಅರಣ್ಯ ಇಲಾಖೆ, ಸಾಮಾಜಿಕ ವಲಯ ಅರಣ್ಯ ಹಾಗೂ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕು ಕಚೇರಿ ಆವರಣ ಸೇರಿದಂತೆ ವಿವಿಧ ಶಾಲಾ ಕಾಲೇಜು ಆವರಣಗಳಲ್ಲಿ ಗಿಡ ನೆಟ್ಟು ಅವರು ಮಾತನಾಡಿದರು.
ನಮ್ಮನೆಲ್ಲಾ ಕಾಪಾಡಿ, ಪೋಷಿಸುತ್ತಿರುವ ಭೂಮಿಯ ಮೇಲಿನ ಪರಸರ ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪರಿಸರ ರಕ್ಷಣೆ ಸಂವಿಧಾನದಲ್ಲೂ ಸಹ ಬರೆದಿರುವ ಅಂಶವಾಗಿದೆ. ಮಳೆಬಾರದೆ ವಲಸೆ ಹೋಗುವ ಸಂದರ್ಭವನ್ನು ಪರಿಸರ ಕಾಪಾಡದೆ ನಾವೇ ತಂದುಕೊಂಡಿದ್ದೇವೆ ಎಂದರು.
ಪರಿಸರ ಮನುಷ್ಯನಿಗೆ ಹೇಗೆ ಅತ್ಯವಶ್ಯಕತೆಯೋ ಪ್ರಾಣಿ ಹಾಗೂ ಇತರ ಜೀವ ಸಂಕುಲಗಳಿಗೂ ಬೇಕಾಗಿದೆ. ಆದರೆ ಅದರ ಉಳಿವು ಅಳಿವು ಮನುಷ್ಯನ ಮೇಲಿದೆ ಎಂದರು.
ತಾಲ್ಲೂಕು ವಲಯ ಅರಣ್ಯಾಧಿಕಾರಿ ರವಿ ಮಾತನಾಡಿ, ೧೯೭೩ ರಿಂದ ವಿಶ್ವಸಂಸ್ಥೆ ಸೂಚನೆಯಂತೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಭೂಮಿಯಲ್ಲಿ ಮನುಷ್ಯನ ದುರಾಸೆಯಿಂದ ಅರಣ್ಯ ನಾಶವಾಗುತ್ತಿದೆ. ಈ ಅರಣ್ಯ ನಾಶದಿಂದ ಪ್ರಕೃತಿಯಲ್ಲಿ ಹವಾಮಾನ ವೈಪರಿತ್ಯವಾಗುತ್ತಿದ್ದು ವಾತಾರಣದಲ್ಲಿ ಬಹಳ ವ್ಯತ್ಯಾಸದಿಂದ ಅತಿಯಾದ ಬಿಸಿಲು, ತಾಪಮಾನ, ಮಳೆಯ ಅತಿವೃಷ್ಟಿ, ಅನಾವೃಷ್ಟಿ, ಅತಿಯಾದ ಶೀತದಿಂದ ಮನುಷ್ಯ ಹಾಗೂ ಪ್ರಾಣಿಗಳು ತತ್ತರಿಸುತ್ತಿವೆ. ಇದರಿಂದ ಪ್ರತಿಯೊಬ್ಬ ನಾಗರಿಕನಿಗೂ ಅರಿವು ಮೂಡಿಸಲು ಪರಿಸರ ದಿನವನ್ನು ಆಚರಿಸಲಾಗುತ್ತಿತ್ತು. ಪ್ರಸ್ತುತ ನಮ್ಮ ದೇಶದಲ್ಲಿ ಶೇ ೨೦ ರಷ್ಟು, ರಾಜ್ಯದಲ್ಲಿ ಶೇ. ೨೧ ರಷ್ಟು ನಮ್ಮ ತಾಲ್ಲೂಕಿನಲ್ಲಿ ಶೇ ೧೨ ರಷ್ಟು ಅರಣ್ಯವಿದ್ದು ನಮ್ಮ ಜೀವ ವೈವಿದ್ಯತೆಗೆ ಅರಣ್ಯ ಶೇ. ೩೩ ರಷ್ಟು ಬೇಕಿದ್ದು ಅದನ್ನು ನಾವುಗಳು ಬೆಳಸಲು ಶ್ರಮಿಸಬೇಕು ಎಂದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಶಿಲ್ಪ ಮಾತನಾಡಿ, ಈ ವರ್ಷ ತಾಲ್ಲೂಕಿನಲ್ಲಿ ನಮ್ಮ ಇಲಾಖೆಯಿಂದ ೫೦ ಸಾವಿರ ಗಿಡಗಳನ್ನು ಬೆಳಸುವ ಗುರಿ ಹೊಂದಿದ್ದು ಇದರಲ್ಲಿ ೨೫೦೦೦ ಗಿಡಗಳನ್ನು ರೈತರಿಗೆ ಉಳಿದ ೨೫೦೦೦ ಗಿಡಗಳನ್ನು ನಮ್ಮ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಣಧಿಕಾರಿಗಳ ಆದೇಶದಂತೆ ಪ್ರತಿ ಪಂಚಾಯ್ತಿಗೆ ೫೦೦ ಗಿಡಗಳನ್ನು ನೀಡಲಾಗುವುದು. ಅವುಗಳನ್ನು ಪಂಚಾಯ್ತಿಯವರು ಪಂಚಾಯ್ ತಿಆವರಣ, ಅದರ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ಬೆಳಸಬೇಕು ಎಂದರು.
ತಾಲ್ಲೂಕು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷ ಕೆ.ಆರ್. ಓಬಳರಾಜು ಮಾತನಾಡಿ, ವಿಶ್ವ ಪರಿಸರ ದಿನದಂದು ನಮ್ಮ ಸಂಸ್ಥೆಯಿಂದ ಮಕ್ಕಳೊಂದಿಗೆ ಅರಿವು ಜಾಧಾ ಮೂಡಿಸಲಾಗಿದೆ. ಇದರೊಂದಿಗೆ ಗಿಡ ನೆಡುವ ಕೆಲಸವನ್ನು ಮಾಡಲಾಗುತ್ತಿದೆ. ಪರಿಸರ ರಕ್ಷಣೆ ಮತ್ತು ಗಿಡಗಳನ್ನು ನೆಟ್ಟು ಬೆಳಸುವ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಇ.ಓ.ಅಪೂರ್ವ, ಸಿಡಿಪಿಓ ಅಂಬಿಕಾ, ಸಮಾಜ ಕಲ್ಯಾಣಿಧಿಕಾರಿ ಯಮುನಾ, ಕೃಷಿ ಸಹಾಯಕ ನಿರ್ದೇಶಕ ರುದ್ರಪ್ಪ, ಅಧಿಕಾರಿಗಳಾದ ದಿಲೀಪ್‌ಕುಮಾರ್, ಗುರುಮೂರ್ತಿ, ಮಧುಸೂದನ್, ಸ್ಕೌಟ್ಸ್ ಅಂಡ್ ಗೈಡ್ಸ್‌ನ ಪ್ರಸನ್ನಕುಮಾರ್, ಉಷಾ ರಾಧಮ್ಮ ಮತ್ತಿತರರು ಉಪಸ್ಥಿತರಿದ್ದರು.