ಭೂಮಿ ಪೂಜೆ ಕಾರ್ಯಕ್ರಮ


ಲಕ್ಷ್ಮೇಶ್ವರ,ಜ.2- ಪಟ್ಟಣದ ಶಿಗ್ಲಿ ಕ್ರಾಸ್ ನಲ್ಲಿರುವ ಪುರಸಭೆಯ ಸರ್ವೆ ನಂಬರ್ 1 ರಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಗುರುವಾರ ಪುರಸಭೆ ಅಧ್ಯಕ್ಷೆ ಪೂರ್ಣಿಮಾ ಪಾಟೀಲ್ ಅವರು ಭೂಮಿ ಪೂಜೆ ನೆರವೇರಿಸಿದರು.
ನಗರೋತ್ಥಾನ ಸನ್ 2017-18 ಸಾಲಿನ ಮೂರನೇ ಹಂತದ ಅನುದಾನ 45 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಮಾಣಗೊಳುತ್ತಿದ್ದು, ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಇದನ್ನು ಮಳೆಗಾಲ ಪೂರ್ವದಲ್ಲಿಯೇ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ರಾಮಣ್ಣ ಗಡದವರ, ರಾಜು ಕುಂಬಿ, ಜಯಕ್ಕ ಕೊಳ್ಳಿ, ಮಂಜುಳಾ ಗುಂಜಾಳ್ಳ, ಜಯವ್ವ ಅಂದಲಗಿ, ಸಾಹಿಬ್ ಜಾನ್ ಹವಾಲ್ದಾರ್, ಮಹೇಶ್ ಹೊಗೆಸುಪ್ಪಿನ, ಅಶ್ವಿನಿ ಅಂಕಲಕೋಟಿ, ವಿಜಯ್ ಕರಡಿ, ಪೂಜಾ ಕರಾಟೆ, ಫಿರದೋಶ್ ಅಡೂರ, ಯಲ್ಲವ್ವಾ ದುರ್ಗಣವರ, ಗಂಗಾಧರ್ ಮೆಣಸಿನಕಾಯಿ, ಎಂ.ಆರ್. ಪಾಟೀಲ್, ಮುಖ್ಯಾಧಿಕಾರಿ ಎಸ್.ಎಸ್ ಹುಲ್ಲಮನವರ, ಗುತ್ತಿಗೆದಾರ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಹಾಜರು ಇದ್ದರು.