ಭೂಮಿ ನಮ್ಮದಲ್ಲ, ಮುಂದಿನ ಪೀಳಿಗೆಗೂ ಅತ್ಯವಶ್ಯಕ

ದಾವಣಗೆರೆ; ಜೂ.14; ಭೂಮಿ ತಮಗಲ್ಲದೆ ಮುಂದಿನ ಪೀಳಿಗೆಗೂ ಅತ್ಯವಶ್ಯಕ, ಭೂಮಿ ಮೇಲೆ ಬದುಕಲು ಎಲ್ಲಾ ಜೀವಿಗಳಿಗೂ ಹಕ್ಕಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಸೋಮವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಮಾಲಿನ್ಯ ಮಂಡಳಿ ದಾವಣಗೆರೆ, ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಪ್ರಾದೇಶಿಕ ಕೇಂದ್ರ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ದಾವಣಗೆರೆ ಇವರ ಸಹಯೋಗದೊಂದಿಗೆ ಜರುಗಿದ ವಿಶ್ವ ಪರಿಸರ ದಿನ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು  ಎಂಬ ಘೋಷಣೆಯೊಂದಿಗೆ, ಮನುಷ್ಯನ ಸ್ವಾರ್ಥದಿಂದ ಪರಿಸರ ನಾಶವಾಗುತ್ತಿದೆ, ನಮ್ಮ ಭೂಮಿಯಲ್ಲಿ ಜೀವ ವೈವಿಧ್ಯತೆ ದಿನದಿಂದ ದಿನಕ್ಕೆ ತೀರಾ ಕಡಿಮೆಯಾಗುತ್ತಿದ್ದು, ಮಾನವ ಸಂತತಿ ಹೆಚ್ಚುತ್ತಿದೆ. ಮಾನವ ನಿರ್ಮಿತ ವಸ್ತುಗಳನ್ನು ಬಳಸದೇ ನೈಸರ್ಗಿಕವಾಗಿ ಸಿಗುವಂತಹ ಸಂಪನ್ಮೂಲಗಳನ್ನು ಬಳಸಿ ಎಂದರು.
 ಎರಡನೇ ಮಹಾಯುದ್ಧದ ನಂತರ ಪ್ರಾಣಿ, ಪಕ್ಷಿ, ಸೂಕ್ಷ್ಮಾಣು ಜೀವಿಗಳು ಕಣ್ಮರೆಯಾಗಿ, ಮನುಷ್ಯ ತನ್ನ ತನವನ್ನು ಮೇರೆಯುತ್ತಿದ್ದಾನೆ, ಇರುವುದೊಂದೆ ಭೂಮಿ ಎಲ್ಲಾರೂ ಗಿಡ ನೆಡುವುದರ ಮೂಲಕ ನಮ್ಮ ಪರಿಸರವನ್ನು ನಾವೇ ಸಂರಕ್ಷಿಸೋಣ ಎಂದರು.