ಭೂಮಿ ತಂಪಾದರೆ ಮನುಕುಲ ಉಳಿಯುವುದು


ಮುಧೋಳ,ಏ.26: ಸಕಾಲಕ್ಕೆ ಮಳೆಯಾಗಿ ಭೂಮಿ ತಂಪಾದರೆ, ಗಿಡ-ಮರಗಳಿಗೆ, ಪ್ರಾಣಿ-ಪಕ್ಷಿಗಳಿಗೆ ಹಾಗೂ ಮನುಕುಲಕ್ಕೆ ತುಂಬಾ ಅನುಕೂಲಕರವಾಗುತ್ತದೆ ಎಂದು ಮುಧೋಳ ಮುಖ್ಯ ನ್ಯಾಯಾಧೀಶೆ ಗೀತಾಮಣಿ ಹೇಳಿದರು.
ಅವರು ವಲಯ ಅರಣ್ಯಾಧಿಕಾರಿಗಳ ಕಚೇರಿಯ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆ ನಿಮಿತ್ತ ಸಸಿಗೆ ನೀರುಣಿಸಿ ಮಾತನಾಡಿದರು. ಏಪ್ರೀಲ್ 22 ರಂದು ವಿಶ್ವದಾದ್ಯಾಂತ ಪರಿಸರ ಮತ್ತು ಭೂ ದಿನಾಚರಣೆ ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗಿಡಮರಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಸಾರ್ವಜನಿಕರಿಗೆ ಆಕ್ಸಿಜನ್ ಕೊರತೆ ಉಂಟಾಗುತ್ತದೆ. ಇದರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆದ್ದರಿಂದ ಹೆಚ್ಚು ಗಿಡಮರಗಳನ್ನು ಬೆಳೆಸುವುದರಿಂದ ಸಕಾಲಕ್ಕೆ ಮಳೆಯಾಗಿ ಪರಿಸರ ಅಭಿವೃದ್ಧಿಗೊಳ್ಳುವುದಲ್ಲದೇ ಸರಿಯಾದ ಆಕ್ಸಿಜನ್ ದೊರೆತು ಜನ ಆರೋಗ್ಯವಂತರಾಗಿರುತ್ತಾರೆ. ಆದ್ದರಿಂದ ಸಾರ್ವಜನಿಕರು ಭೂಮಿ ಸಂರಕ್ಷಣೆ ಜೊತೆಗೆ ಗಿಡ-ಮರ ಬೆಳೆಸುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಹಿರಿಯ ನ್ಯಾಯಾಧೀಶ ವಿವೇಕ ಗ್ರಾಮೋಪಾಧ್ಯ, ಸದಸ್ಯ ಕಾರ್ಯದರ್ಶಿಗಳು ತಾಲೂಕಾ ಕಾನೂನು ಸೇವಾ ಸಮಿತಿಯ ನ್ಯಾಯಾಧೀಶ ಸಿದ್ದನಗೌಡ ಪಾಟೀಲ ಟಿ., ಪ್ರಧಾನ ದಿವಾಣಿ ಹೆಚ್ಚುವರಿ ನ್ಯಾಯಾಧೀಶ ಸರಸ್ವತಿ ಹೋಟಕರ, ವಕೀಲರ ಸಂಘದ ಅಧ್ಯಕ್ಷ ವ್ಹಿ.ಡಿ.ಕತ್ತಿ, ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.