ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ನೀಡಲು ಆಗ್ರಹ

ಕಲಬುರಗಿ:ನ.22: ಆಳಂದ ತಾಲೂಕಿನ ಕಡಗಂಚಿ ಹತ್ತಿರದ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ಜಮೀನು ನೀಡಿದ ರೈತ ಕುಟುಂಬದವರಿಗೆ ವಿಶ್ವವಿದ್ಯಾಲಯದಲ್ಲಿ ನೌಕರಿ ನೀಡಬೇಕು ಎಂದು ಹೈದರಾಬಾದ್ ಕರ್ನಾಟಕ ರೈತ ಹಿತರಕ್ಷಣಾ ಹೋರಾಟ ಸಮಿತಿ ಇಂದು ಪ್ರಭಾರಿ ಕುಲಪತಿ ನಾಗರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಕುರಿತು ಅನೇಕ ಬಾರಿ ಪ್ರತಿಭಟನೆ ನಡೆಸಿ ನೌಕರಿ ನೀಡಬೇಕು ಎಂದು ಒತ್ತಾಯಿಸಲಾಗಿದೆ.ಹಿಂದಿನ ಕುಲಪತಿಗಳು ತಮ್ಮ ವಿಶ್ವವಿದ್ಯಾಲಯದಲ್ಲಿ ಸುಮಾರು ಭೂಮಿ ನೀಡಿದ 42 ರೈತರ ಕುಟುಂಬಗಳಿಗೆ ತಲಾ ಒಂದು ಉದ್ಯೋಗ ನೀಡಿದ್ದಾರೆ.ಇನ್ನು 44 ಕುಟುಂಬಗಳು ಬಾಕಿ ಉಳಿದಿದೆ.ಇವರಿಗೂ ಕೂಡಲೇ ಉದ್ಯೋಗ ಒದಗಿಸಿಕೊಡಬೇಕು.ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಕೆಲವರನ್ನು ಕೋವಿಡ ನೇಪದಲ್ಲಿ ಕೆಲಸದಿಂದ ತೆಗೆದುಹಾಕಲಾಗಿದೆ.ಇದರಿಂದ ಅವರ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ.ಕೂಡಲೇ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಸಿರಗಾಪೂರ ಮುಖಂಡರಾದ ಯಶ್ವಂತರಾಯ ಪಾಟೀಲ್, ಭೀಮಾಶಂಕರ ಪಟ್ಟಣ, ಬಾಬಾ ಫಕ್ರುದ್ದೀನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.