ಭೂಮಿ ಕಳೆದುಕೊಂಡವರಿಗೆ ಕೆಲಸ ನೀಡಲು ಒತ್ತಾಯ

ನಂಜನಗೂಡು: ನ.17:- ಕಡಕೋಳ ಗ್ರಾಮದಲ್ಲಿ ನೂತನವಾಗಿ ರೈತ ಸಂಘವನ್ನು ಸ್ಥಾಪಿಸಲಾಯಿತು ಈ ಕಾರ್ಯಕ್ರಮವನ್ನು ರೈತ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಉದ್ಘಾಟಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಈ ಭಾಗದಲ್ಲಿ ರೈತ ಸಂಘ ಹೊಸದೇನಲ್ಲ ಹಿಂದಿನಿಂದಲೂ ಅನೇಕ ಮುಖಂಡರು ರೈತ ಸಂಘದಲ್ಲಿ ದುಡಿದಿದ್ದಾರೆ ಹಾಗೂ ರೈತಪರ ರೈತರಿಗಾಗಿ ರೈತರ ಹಿತಕ್ಕಾಗಿ ದೊಡ್ಡ ದೊಡ್ಡ ಹೋರಾಟದಲ್ಲಿ ಪಾಲ್ಗೊಂಡು ನ್ಯಾಯ ದೊರಕಿಸಿ ಕೊಟ್ಟಿರುವವರು ಇದ್ದಾರೆ ಆದರೂ ಕೂಡ ನೂತನ ಸಂಘವನ್ನು ನಿರ್ಮಿಸಿ ಇವರ ಜೊತೆ ಯುವ ರೈತರನ್ನು ಕೈಜೋಡಿಸಿ ಹೊಸ ಸಂಘವನ್ನು ಸ್ಥಾಪಿಸಲಾಗಿದೆ ಮುಂದಿನ ಹೋರಾಟಗಳನ್ನು ಎಲ್ಲರೂ ಒಟ್ಟಾಗಿ ಹೋರಾಡಿ ನಮ್ಮ ಹಕ್ಕುಗಳನ್ನು ಪಡೆಯಬೇಕೆಂದರು.
ರೈತ ಸಂಘದ ಕಾರ್ಯದರ್ಶಿ ಇಮ್ಮವು ರಘು ಮಾತನಾಡಿ ಈ ಭಾಗದಲ್ಲಿ ಅನೇಕ ಕಾರ್ಖಾನೆಗಳಿಗೆ ಈ ಭಾಗದ ರೈತರು ಭೂಮಿಯನ್ನು ಕೊಟ್ಟಿದ್ದಾರೆ ಕೊಡುವ ಸಂದರ್ಭದಲ್ಲಿ ಕುಟುಂಬದಲ್ಲಿ ಒಬ್ಬರಿಗೆ ಕಾರ್ಖಾನೆಯಲ್ಲಿ ಕೆಲಸ ನೀಡುವುದಾಗಿ ತಿಳಿಸಿದರು ಆದರೆ ಯಾರಿಗೂ ನೀಡದೆ ಕುಂಟುನೆಪ ಹೇಳಿಕೊಂಡಿದ್ದಾರೆ ಆದರೆ ಭೂಮಿ ಕಳೆದುಕೊಂಡ ರೈತರಿಗೆ ಕೆಲಸ ನೀಡಲೇಬೇಕು ಆದರೆ ಒಂದು ತರ ಯೋಚನೆ ಮಾಡಿದರೆ ಭೂಮಿ ನೀಡಿದವರಿಗೆ ಪಾಲುದಾರರಾಗಿ ಮಾಡಬೇಕೆಂಬುದು ಇದೆ ಆದರೆ ನಮಗೆ ಕೆಲಸ ಸಾಕು ಎಂಬುದೇ ಆಗಿತ್ತು ನಾವು ನಿಮ್ಮ ಮುಂದೆ ಭಿಕ್ಷೆ ಬೇಕಾಗಿಲ್ಲ ನಾವು ಭೂಮಿ ಕಳೆದುಕೊಂಡಿರುವವರು ನಮಗೆ ನಿಮ್ಮ ಕಾರ್ಖಾನೆಯಲ್ಲಿ ಕೆಲಸ ನೀಡಲೇಬೇಕು ಎಂದು ಈ ಸಂದರ್ಭದಲ್ಲಿ ಕಾರ್ಖಾನೆ ವಿರುದ್ಧ ಹರಿಹಾಯ್ದರು.
ರೈತರು ಒಗ್ಗಟ್ಟಾಗಿ ಹೋರಾಡಿದರೆ ನಾವು ಕೆಲಸಗಳನ್ನು ಪಡೆಯಬಹುದು ಅದೇ ರೀತಿ ಹೋರಾಡುತ್ತಿದ್ದೇವೆ ಕಳೆದ ಹತ್ತು ವರ್ಷ ಹಿಂದೆ ಕೆಐಡಿಬಿಗೆ ಭೂಮಿ ನೀಡಿದೆವು ಇನ್ನೂ ಕೆಲಸ ಒಬ್ಬರಿಗೂ ನೀಡಿಲ್ಲ ಇದರ ಬಗ್ಗೆ ಚರ್ಚಿಸಿದ್ದೇವೆ ಇನ್ನು ಎರಡು ದಿನದಲ್ಲಿ ಕೆಲಸ ನೀಡುವ ಭರವಸೆ ನೀಡಿದ್ದಾರೆ ಎಂದರು ಎಸ್ ಬಿ ಎಫ್ ಕಾರ್ಖಾನೆಯಲ್ಲಿ ಹೋರಾಟ ಮಾಡಿ ಮೂರು ಜನರಿಗೆ ಕೆಲಸ ನೀಡಿದ್ದಾರೆ ಇನ್ನು ಕೆಲವು ಕಾರ್ಖಾನೆಗಳಲ್ಲಿ ಕೆಲಸ ನೀಡುತ್ತಿದ್ದಾರೆ ಅದರಿಂದ ರೈತರಲ್ಲಿ ಒಗ್ಗಟ್ಟು ಇದ್ದರೆ ಏನೇ ಬಂದರೂ ಹೋರಾಟಮಾಡಿ ಪಡೆಯಬಹುದು ಇಂದಿನಿಂದಲೇ ನೀವು ಒಬ್ಬ ರೈತ ಮುಖಂಡ ಎಂದು ತಿಳಿದುಕೊಂಡು ಹೋರಾಟ ಮಾಡಿ ನ್ಯಾಯ ದೊರಕಿಸಿಕೊಡಬೇಕೆಂದು ರೈತರ ಸಮ್ಮುಖದಲ್ಲಿ ಮಾತನಾಡಿದರು.