ಭೂಮಿ ಕಬಳಿಸಿಲ್ಲ ಮೋದಿ ಹೇಳಿಕೆಗೆ ರಾಗಾ ಆಕ್ಷೇಪ

ಲಂಡನ್,ಮಾ.೬- ಗಡಿ ಭಾಗದಲ್ಲಿ ಭಾರತ ಭೂಪ್ರದೇಶದ ೨೦೦೦ ಚದರ ಕಿಮೀ ಅನ್ನು ಚೀನಾ ಸೇನಾ ನಿಯಂತ್ರಣದಲ್ಲಿದ್ದೂ ಪ್ರಧಾನಿ ನರೇಂದ್ರ ಮೋದಿ ಒಂದೇ ಒಂದು ಇಂಚು ಭೂಮಿಯನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಹೇಳುತ್ತಿರುವುದು ದುರಂತವೇ ಸರಿ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇರ ವಾಗ್ದಾಳಿ ನಡೆಸಿದ್ದಾರೆ.
ಭಾರತದ ಭೂ ಭಾಗಕ್ಕೆ ಯಾರೂ ನುಗ್ಗಿ ನಮ್ಮನ್ನು ಬೆದರಿಸುವುದನ್ನು ಒಪ್ಪುವುದಿಲ್ಲ. ಚೀನೀಯರು ನಮ್ಮ ಪ್ರದೇಶಕ್ಕೆ ನುಗ್ಗಿ ಸೈನಿಕರನ್ನು ಕೊಂದಿದ್ದಾರೆ,ಅದನ್ನೂ ಆದರೆ ಪ್ರಧಾನಿ ನಿರಾಕರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಲಂಡನ್‌ನಲ್ಲಿ ಭಾರತೀಯ ಪತ್ರಕರ್ತರ ಸಂಘದ ಜೊತೆಗಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಾರತದ ಗಡಿಯಲ್ಲಿ ಚೀನಿಯರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಚೀನಿಯರು ಪ್ರತಿಕೂಲ, ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ಬೆದರಿಕೆ ಅರ್ಥವಾಗುತ್ತಿಲ್ಲ:
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ‘ಚೀನಾ ಬೆದರಿಕೆ’ ಅರ್ಥವಾಗುತ್ತಿಲ್ಲ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.
ಭಾರತೀಯ ವಿದೇಶಾಂಗ ನೀತಿ ಕುರಿತು ಬೆಂಬಲಿಸಿದ ಅವರು ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭಾರತದ ನಿಲುವಿಗೆ ಸಂಬಂಧಿಸಿದಂತೆ ದೊಡ್ಡ ಭಿನ್ನಾಭಿಪ್ರಾಯ ಹೊಂದಿಲ್ಲ ಎಂದು ಹೇಳಿದ್ದಾರೆ.
ಬಿಬಿಸಿ ಕಚೇರಿಗಳ ಮೇಲೆ ಭಾರತ ದಾಳಿ ನಡೆಸಿರುವುದು ಧ್ವನಿ ಹತ್ತಿಕ್ಕುವ ಕೆಲಸ ಮಾಡಿದೆ ಎಂದು ದೂರಿದ ಅವರು ಪ್ರಧಾನಿ ಮೋದಿ ತಮ್ಮ ‘ನವ ಭಾರತದ ಕಲ್ಪನೆ’ಯಲ್ಲಿ ಎಲ್ಲರೂ ‘ಮೌನವಾಗಿರಲು’ ಬಯಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.