ಭೂಮಿರಕ್ಷಣೆ ಪ್ರತಿಯೊಬ್ಬರ ಹೊಣೆ ; ನ್ಯಾಯಾಧೀಶ ವೆಂಕಣ್ಣ ಹೊಸಮನಿ

ವಿಜಯಪುರ ;ಎ.23:ಸೌರಮಂಡಳದ ಸೂರ್ಯನಿಗೆ ಸಮೀಪದ ಮೂರನೇ ಗ್ರಹ ಆಗಿರುವ ಭೂಮಿ ಒಂದೇ ಮಾನವರು ನೆಲೆಸುವ ಉತ್ತಮ ಸ್ಥಳವಾಗಿದ್ದು, ಭೂಮಿರಕ್ಷಣೆ ಮಾಡುವುದು ಪ್ರತಿಯೊಬ್ಬ ಮಾನವರ ಹೊಣೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಶ್ರೇಣಿ ಸಿವ್ಹಿಲ್ ನ್ಯಾಯಾಧೀಶ ಶ್ರೀ ವೆಂಕಣ್ಣ ಹಸಮನಿ ಹೇಳಿದರು.
ಅವರು ವಿಜಯಪುರ ಮಹಾನಗರದ ಭೂತನಾಳ ಸಸ್ಯಪಾಲನಾಲಯ ಕೇಂದ್ರ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಇವರುಗಳ ಆಶ್ರಯದಲ್ಲಿ ನಡೆದ ವಿಶ್ವ ಭೂಮಿ ದಿನಾಚಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಸ್ಯ ಸಂಕುಲ ಮತ್ತು ಜೀವ ಸಂಕುಲ ಉಳಿಯಬೇಕಾದರೆ ಆರಣ್ಯವನ್ನು ಉಳಿಸಿ ಕಾಡು ಬೆಳಸಬೇಕಾಗಿದೆ ಬಿಸಿಲಿನ ತಾಪಮಾನವನ್ನು ಕಡಿಮೆ ಮಾಡಬೇಕದರೆ ಅರಣ್ಯ ಬೆಳೆಸುವುದು ಹಾಗೂ ರಕ್ಷಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದರು.
ಜನಂಖ್ಯೆ ಹೆಚ್ಚಬಹುದು ಆದÀರೆ ಭೂಮಿಯ ವಿಸ್ತೀರ್ಣ ಹೆಚ್ಚಸಲಾಗದು. ಇಂದು ಅದೆ ಷ್ಟೋಜನ ಭೂಮಿಯನ್ನು ಹಾಳು ಮಾಡುತ್ತಿದ್ದಾರೆ ಇದರಿಂದ ನಿಸರ್ಗವು ಹಾಳಾಗಿ ಮಾನವರಿಗೆ ಅನಾನುಕೂಲವಾಗುತ್ತದೆ ಎಂದು ಹೊಸಮನಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಸಿದ ಹಿರಿಯಖ್ಯಾತ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರು ಮಾತನಾಡಿ ವಿಶ್ವದಲ್ಲಿ ಐದು ಮಹಾಭೂತಗಳಿದ್ದು ಅವುಗಳನ್ನು ನಾವು ಪಂಚಮಹಾಭೂತಗಳು ಅಂತಕರೆಯುತ್ತೇವೆ ಆ ಐದರಲ್ಲಿ ನಮಗೆ ಅಗತ್ಯವಾದ ಆಹಾರ ಪದಾರ್ಥ ಇತ್ಯಾದಿ ಬೆಳೆಯಲು ಭೂಮಿಯು ಅತ್ಯಗತ್ಯವಾಗಿದೆ ಇಂತಹ ಅಗತ್ಯವಾದ ಭೂಮಿಯನ್ನು ನಮ್ಮ ಹಿಂದಿನ ಪೂರ್ವಜರು ಭೂಮಿ ಪೂಜೆ ಮಾಡುತ್ತಲೇ ಬಂದಿದ್ದಾರೆ. ಎಳ್ಳಾಮವಾಸೆÉ ಹಾಗು ಹಬ್ಬ ಹರಿದಿನಗಳಂದು ಇಂದಿಗೂ ಭೂಮಿ ಪೂಜೆಮಾಡುತ್ತ ಬರುತ್ತಿರುವುದು ಮತ್ತು ಮನೆ, ಕಟ್ಟಡ ಕಟ್ಟುವಾಗಲು ಭೂಮಿ ಪೂಜೆ ಮಾಡುವ ವಾಡಿಕೆ ಭಾರತೀಯರ ಪದ್ದತಿಗಳಲ್ಲಿ ಇರುವುದು ಭೂಮಿಯ ಮಹತ್ವ ತೋರುತ್ತದೆ ಎಂದ ಅವರು ಭೂಮಿಯನ್ನು ಸದಾ ಉತ್ತಮವಾಗಿ ಇಟ್ಟುಕೊಳ್ಳಬೇಕು ಆದರೆ ಪೆಟ್ಟರಿಸೈಡ ಅಳವಡಿಸಿ ಜನರು ಭೂಮಿಗೆ ವಿಷಉಣಿಸುತ್ತಿದ್ದಾರೆ ಇದು ಸರಿಯಾದ ಕ್ರಮವಲ್ಲ ಎಂದರು.
ಆರಾಣ್ಯ ಅಧಿಕಾರಿಗಳಾದ ಸಂತೋಷಕುಮಾರ ಆಜೂg Àಅವರು ಮಾತನಾಡಿಆರಣ್ಯ ಬೆಳಸಿ ಉಳಿಸಿದರೆ ಮಾತ್ರ ನಿಸರ್ಗದಲ್ಲಿತಂಪು ಉಳಿಸಲು ಸಾಧ್ಯಇಲ್ಲವಾದರೆ ಭವಿಷ್ಯದಲ್ಲಿ ಮಾನರಿಗೆಇತರ ಪ್ರಾಣಿಗಳಿಗೆ ತುಂಬಾ ತೊಂದರೆಯಾಗುತ್ತದೆ. ಕಾರಣ ಅರಣ್ಯ ಇಲಾಖೆಯು ಸಸಿಗಳನ್ನು ಸಹ ಅರಣ್ಯ ಉಳಿಸಿ ಬೆಳೆಸಲು ಮತ್ತು ಹಸಿರೆ ಉಸಿರಾಗಿಸಲು ಜನರಿಗೆ ಬೆಳೆಯಲು ಬೆಲೆ ಸಹಿತ ವಿತರಿಸಲಾಗುತ್ತದೆ ಅದರ ಲಾಭ ಪಡೆದಜನರುಅರಣ್ಯ ಮತ್ತು ನಿಸರ್ಗ ಎರಡನ್ನೂ ಉಳಿಸಲೇ ಬೇಕು ಎಂದರು.
ಹಿರಯ ನ್ಯಾಯವಾದಿ ಮಲ್ಲಿಕಾರ್ಜುನ ಲೋಗಾಂವಿ ಅವರು ಮಾತನಾಡಿ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೆ ಸಸಿ ನೀಡುವ ಮೂಲಕ ಹಸಿರೇಉಸಿರೆಂಬ ತತ್ವ ಪಾಲಿಸಬೇಕು ಸಸಿ ನೆಟ್ಟು ಹಸಿರು ಬೆಳೆಸಿದರೆ ಅದು ಪೂರಕವಾಗುತ್ತದೆ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಭೂಮಂಡಲದಲ್ಲಿ ಹಚ್ಚಹಸಿರಾಗಿ ಬಿಸಿಲು ನಿಯಂತ್ರಣಕ್ಕೆ ಸಹಕಾರಿಯಾಗಿ ಮಾನವರು ವಾಸಿಸಲು ಸದಾ ಸುಖಕರವಾಗುತ್ತದೆ ಎಂದು ಪ್ರತಿಪಾದಿಸಿದರು.
ಅರಣ್ಯಇಲಾಖೆಯ ಉಪ ಅರಣ್ಯಅಧಿಕಾರಿ ಅನಿಲಕುಮಾರ ಲೋಣಿ, ಪ್ರವೀಣ ಅಂಗಡಿ, ಗುರು ಲೋಣಿ ಗುರಪ್ಪ ಬಾಗೇವಾಡಿ, ಚಂದ್ರಶೇಖರ ಚಿಮ್ಮಲಗಿ, ಶ್ರೀಧರ ಪತ್ತಾರ.ಶ್ರೀಕಾಂತ ಮುಂತಾದವರು ಪಾಲ್ಗೊಂಡಿದ್ದರು.
ಅರಣ್ಯ ಇಲಾಖೆಯ ಭೂತನಾಳ ಸಸ್ಯ ಪಾಲನಾಲಯದಲ್ಲಿ ಬಾಲಕಿ ನಕ್ಷತ್ರ ಹಾಗೂ ಇತರರು ಸಸಿಗಳನ್ನು ನೆಡುವ ಮೂಲಕ ಭೂಮಿ ದಿನಾಚರಣೆಯನ್ನು ವಿಶಿಷ್ಟವಾಗಿ ಆಚಾರಿಸಲಾಯಿತು. ಭೂಮಿ ಉಳಿಸಿ ಸಸ್ಯ ಬೆಳಸಿ ಘೋಷಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು