ಭೂಮಿಯ ಶ್ವಾಸಕೊಶದಂತಿರುವ ಕಾಡನ್ನು ಸಂರಕ್ಷಿಸಿ: ಕಾವಡಿ

ಹುಮನಾಬಾದ : ಮಾ.23:ಪರಿಸರ ಸಮತೋಲನ ಕಾಪಾಡುವಲ್ಲಿ ಅರಣ್ಯಗಳು ಅದ್ಭುತ ಪಾತ್ರ ವಹಿಸುತ್ತವೆ. ಅರಣ್ಯ ನಾಶದಿಂದ ಭೂತಾಪಮಾನ ಹೆಚ್ಚಳವಾಗಿ ಅನೇಕ ಪ್ರಕೃತಿ ವಿಕೋಪಗಳು ಸಂಭವಿಸಲು ಆರಂಭಿಸಿವೆ ಎಂದು ಪರಿಸರ ವಾಹಿನಿ ಬೀದರ ಅಧ್ಯಕ್ಷ ಶೈಲೇಂದ್ರ ಕಾವಡಿ ಬಸವತೀರ್ಥ ವಿದ್ಯಾಪೀಠ ಪ್ರೌಢ ಶಾಲೆ ಹುಡಗಿಯಲ್ಲಿ ಸರ್.ಸಿ.ವಿ. ರಾಮನ್ ಇಕೋ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಅರಣ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ನುಡಿದರು. ಅರಣ್ಯ ನಾಶದಿಂದ ಮಾನವನಾಶ ವಾಗುವ ದಿನಗಳು ಸಮಿಪಿಸುತ್ತಿವೆ. ಅರಣ್ಯ ಸಂರಕ್ಷಣೆ ಮಾಡಿದರೆ ನಮಗೆ ಉಳಿಗಾಲವಿದೆ. ಕಾಡುಗಳು ಭೂಮಿಯ ಶ್ವಾಸಕೋಶವಿದ್ದಂತೆ ಅವು ವಾತಾವರಣದ ಕಾರ್ಬನ್ ಡೈ ಆಕ್ಸೈಡ್ ಹಾಗೂ ಆಮ್ಲಜನಕದ ಸಮತೋಲನ ಕಾಪಾಡಲು ತುಂಬ ಸಹಾಯಕವಾಗಿದೆ. ಆರೋಗ್ಯಯುತ ಅರಣ್ಯವೆಂದರೆ ಆರೋಗ್ಯಯುತ ಪರಿಸರವಿದ್ದಂತೆ ಎಂದು ಬಣ್ಣಿಸಿದರು. ಜಲಚಕ್ರವನ್ನು ರಕ್ಷಿಸಿ ಮಣ್ಣಿನ ಫಲವತ್ತತೆ ಕಾಪಾಡಲು ಅರಣ್ಯ ಬೇಕು ಅರಣ್ಯವನ್ನು ನಿರಂತರವಾಗಿ ನಾಶ ಮಾಡುತ್ತ ಹೊದಂತೆ ಮುಂದೊಂದು ದಿನ ಉಸಿರಾಡಲು ಆಕ್ಸಿಜನ್ ಸಿಗದೆ ಹೊದಾಗ ಭೂಮಿಯ ಮೇಲಿನ ಎಲ್ಲಾ ಜನರಿಗೂ ಸಾಕಾಗುವಷ್ಟು ಆಕ್ಸಿಜನ್ ದುಡ್ಡಿನಿಂದೆ ಪಡೆಯಲಾದಿತೆ ಎಂದು ಪ್ರಶ್ನಿಸಿದರು. ಹುಡಗಿ ಗ್ರಾಮದಲ್ಲಿ ದೇಶಿಯ ವೃಕ್ಷಗಳು ಅತ್ಯದಿಕ ಪ್ರಮಾಣದಲ್ಲಿ ಇದ್ದು ಅವುಗಳ ತಳಿಗಳನ್ನು ಸಂರಕ್ಷೀಸಿ ಉಳಿಸಿ ಬೆಳೆಸಲು ಮನವಿ ಮಾಡಿದರು. ಬಸವತೀರ್ಥ ಪ್ರೌಢ ಶಾಲೆ ಅತ್ಯತ್ತಮ ಪರಿಸರ ಸಂರಕ್ಷಣೆ ಜಾಗೃತಿಗಾಗಿ ಪರಿಸರ ವಾಹಿನಿಯಿಂದ ನೀಡುವ 2021 ನೇ ಪರಿಸರೋತ್ಸವ ಪ್ರಶಸ್ತಿ ನೀಡಲಾಗುವುದೆಂದು ಶೈಲೇಂದ್ರ ಕಾವಡಿ ಘೋಷಿಸಿದರು. ಸಹ ಉಪನ್ಯಾಸಕ ಸದಾಶಿವಯ್ಯಾ ವಿಭೂತಿ ಮಾತನಾಡಿ ಔಷಧಿ ಸಸ್ಯಗಳನ್ನು ಬಳಸಿ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಕಡಿಮೆಮಾಡಲು ಸಲಹೆ ನೀಡಿದರು ಪ್ರತಿಯೊಬ್ಬರು ಮನೆ ಮನೆಯಲ್ಲಿ ತುಳಸಿ, ಅಮೃತ ಬಳ್ಳಿ, ನವಳಸರ, ಗಿಡಗಳು ಬೆಳೆಸಿ ಉಪಯೋಗಿಸಲು ಕರೆ ನೀಡಿದರು. ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ಭಾಷಣ ಸ್ಪರ್ಧೆ ಜರುಗಿತು. ಕೀರ್ತಿ, ದೀಪಿಕಾ ಅಭಿಶೇಕ, ಭಾಗ್ಯಶ್ರೀ, ಪಲ್ಲವಿ, ಬಹುಮಾನಗಳನ್ನು ಪಡೆದರು. ಶಾಲಾ ಮುಖ್ಯಗುರುಗಳಾದ ಗೀತಾದೇವಿ ಮುಗಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಕಕಿ ಶಾಲಾ ಆವರಣದಲ್ಲಿ ಸಸಿಗಳು ನೆಡಸಲಾಯಿತು ಸಹ ಶಿಕ್ಷಕರುಗಳಾದ ಸವಿತಾ ಪಾಟೀಲ, ಕರುಣಾದೇವಿ, ಶರಣಪ್ರಕಾಶ ಮುಗಳಿ, ಜೈವಂತ ರೆಡ್ಡಿ, ಕುಪೇಂದ್ರ ಬ್ಯಾನರ್ಜಿ ಉಪಸ್ಥಿತರಿದ್ದರು, ಉಮೇಶ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.