ಭೂಮಿಪೂಜೆ ಕಾರ್ಯಕ್ರಮ

ಕೊಲ್ಹಾರ:ಮಾ.15: ಪಟ್ಟಣದ ವಾರ್ಡ್ ಸಂಖ್ಯೆ 4 ಮತ್ತು 5 ರಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ, ಪುನರ್ ವಸತಿ ಪುನರ್ ನಿರ್ಮಾಣ ಇಲಾಖೆ ಅಡಿಯ ಡಾಂಬರೀಕರಣ ಹಾಗೂ ಸಿ.ಸಿ ಚರಂಡಿ ಕಾಮಗಾರಿಗೆ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ.ಎಸ್ ಪಾಟೀಲ್ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ ಪಂ ಸದಸ್ಯರಾದ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್ ಬಿ ಪಕಾಲಿ, ಕಾಂಗ್ರೆಸ್ ಮುಖಂಡರಾದ ಉಸ್ಮಾನ್ ಪಟೇಲ್ ಖಾನ್, ಎಸ್. ಬಿ ಪತಂಗಿ, ಹನೀಪ ಮಕಾನದಾರ, ಮಹೇಶ ಗಿಡ್ಡಪ್ಪಗೋಳ, ರಿಯಾಜ ಕಂಕರಪೀರ, ಪ ಪಂ ಸದಸ್ಯರಾದ ಸಿ.ಎಸ್ ಗಿಡ್ಡಪ್ಪಗೋಳ, ಲಕ್ಷ್ಮೀಬಾಯಿ ಹೆರಕಲ್, ತೌಸೀಪ್ ಗಿರಗಾಂವಿ, ದಸ್ತಗೀರ ಕಲಾದಗಿ, ನಿಂಗು ಗಣಿ, ಇಕ್ಬಾಲ್ ನದಾಫ, ಮಲ್ಲು ಹೆರಕಲ್, ಗೈಬು ಕಂಕರಪೀರ, ಕಾಸಿಮ ವಾಲಿಕಾರ, ಸಿದ್ದು ಗಣಿ, ಕೃ.ಮೇ.ಯೋ ಪು.ಪು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಆಯ್ ಶೀಲವಂತ, ಸಹಾಯಕ ಅಭಿಯಂತರ ಎಚ್.ಎಫ್ ಬಜಂತ್ರಿ, ಗುತ್ತಿಗೆದಾರರು ಮಹಾಂತೇಶ ಸುತಗುಂಡಿ ಸಹಿತ ಅನೇಕರು ಇದ್ದರು.