ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಒಂದಲ್ಲ ಒಂದು ದಿನ ಫಲ


ಸಂಜೆವಾಣಿ ವಾರ್ತೆ
ಸಂಡೂರು : ಜು: 20: ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಒಂದಲ್ಲ ಒಂದು ದಿನ ಫಲ ಕೊಡುತ್ತದೆ, ವಿದ್ಯಾರ್ಥಿ ಜೀವನದಿಂದಲೇ ಸಾಹಿತ್ಯದ ಅಭಿವರುಚಿ ಬೆಳೆಸಿಕೊಳ್ಳಿ ಎಂದು ಉಪನ್ಯಾಸಕ ಬಂದಿ ನಾಗರಾಜ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿಘಟಕ ಚೋರನುರು ಘಟಕದ ವತಿಯಿಂದ ಚೋರನೂರು ಹೋಬಳಿಯ ಸೋವೆನಹಳ್ಳಿ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಪ್ರೌಢಶಾಲೆಯಲ್ಲಿ ಎಡೆಯೂರು ಸಿದ್ದಲಿಂಗೇಶ್ವರರ ಕೊಡುಗೆ ಕುರಿತು ಉಪನ್ಯಾಸ ನೀಡಿ ಮಾಥನಡಿ ಶರಣರ ಬದುಕು ನಮಗೆ ಆದರ್ಶ ಪ್ರಾಯವಾಗಿರುವಂತಹದ್ದು, ಅವರು ರಚಿಸಿದ ಸಾಹಿತ್ಯ ಇಂದಿಗೂ ಸಹ ನಮಗೆ ಮಾದರಿಯಾಗಿದೆ, ರಚಿಸಿದ ವಚನಗಳು ಬಹು ಮುಖ್ಯವಾದುದು ಅವುಗಳನ್ನು ಅಳವಡಿಸಿಕೊಳ್ಳೋಣ ಎಂದರು.
ಪ್ರಸ್ತಾವಿಕ ನುಡಿಗಳನ್ನು ಬಿ.ಅರ್.ಪಿ. ಜಕಣಾಚಾರಿ ಮಾತನಾಡಿ ಶರಣ ಸಾಹಿತ್ಯ ಮತ್ತು ಜನಪದ ಸಾಹಿತ್ಯ ಬದುಕನ್ನು ಹಸನಗೊಳಿಸುವ ಸಾಹಿತ್ಯ, ಸಾಹಿತ್ಯ ಪರಿಷತ್ತು ಜನತೆಗೆ ಸಾಹಿತ್ಯದ ಜೊತೆಗೆ ಕನ್ನಡ ನಾಡು ನುಡಿಯ ಜಾಗೃತಿಯ ಬಗ್ಗೆ, ದತ್ತಿ ದಾನಿಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ರಂಗರಾಘವೇಂದ್ರ ಶೆಟ್ಟಿಯವರು ಕನ್ನಡ ಸಾಹಿತ್ಯ ಪರಿಷತ್ತಿಗೆ ನಮ್ಮ ಹಿರಿಯರ ಹೆಸರಿನಲ್ಲಿ ನೀಡಿದ ದಾನ ನಮ್ಮ ಹಿರಿಯರ ಸೇವೆಯನ್ನು ಸ್ಮರಿಸಿದಂತೆ, ಅದ್ದರಿಂದ ಪ್ರತಿಯೊಬ್ಬರೂ ಸಹ ಇಂತಹ ದಾನ ಮಾಡುವ ಮೂಲಕ ಕನ್ನಡ ಸಾಹಿತ್ಯವನ್ನು ಪಸರಿಸುವ ಮತ್ತು ನಾಡು ನುಡಿಯ ಸೇವೆ ಮಾಡಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಎ.ಟಿ. ಶ್ರೀರಾಮ್, ಹನುಮಂತರಾಜ್, ಎಸ್.ಟಿ. ಸುರೇಶ್, ಹೂಲೇಶ್, ಅಧ್ಯಕ್ಷ,  ಪ್ರಶಾಂತ, ಎಂ. ಚೈತನ್ಯಕುಮಾರಿ, ವಿದ್ಯಾರ್ಥಿಗಳು ಇತರ ಗಣ್ಯರು ಉಪಸ್ಥಿತರಿದ್ದರು.