ಭೂಮಿಕಾ ಟಾಪರ್, 371 ವಿದ್ಯಾರ್ಥಿಗಳಿಗೆ ಅಗ್ರಶ್ರೇಣಿದ್ವಿತೀಯ ಪಿಯುಸಿ ಪರೀಕ್ಷೆ: ಶಾಹೀನ್ ಕಾಲೇಜು ಸಾಧನೆ

ಬೀದರ್:ಎ.22: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಶೇ 94.64 ರಷ್ಟು ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆಗೈದಿದೆ.

ಪರೀಕ್ಷೆಗೆ ಹಾಜರಾದ ಒಟ್ಟು 1,327 ವಿದ್ಯಾರ್ಥಿಗಳ ಪೈಕಿ 1,256 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 371 ವಿದ್ಯಾರ್ಥಿಗಳು ಅಗ್ರಶ್ರೇಣಿ, 783 ಪ್ರಥಮ ದರ್ಜೆ ಹಾಗೂ 83 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಭೂಮಿಕಾ ಶಾಂತಕುಮಾರ ಶೇ 96.50 ರಷ್ಟು ಅಂಕಗಳೊಂದಿಗೆ ಕಾಲೇಜು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಆದರ್ಶ ರಾಜಕುಮಾರ ಶೇ 96.17, ಅಮೋಘ ಅಶೋಕ ಶೇ 96, ಕಾವನಾ ಶೇ 96, ಫರ್ದಿನ್ ಎಂ. ಶೇ 95.83, ಶಾಂಭವಿ ವೀರಭದ್ರಯ್ಯ ಶೇ 95.50, ತಜೀನ್ ಅಶ್ಫಾಕ್ ಅಹಮ್ಮದ್ ಶೇ 95.50, ಚೈತನ್ಯ ಅರವಿಂದ ಶೇ 95.50, ತಬಸುಮ್ ಸುಲ್ತಾನಾ ಶೇ 95.33, ಖೌಲಾ ಫಾತಿಮಾ ಶೇ 95.17 ರಷ್ಟು ಅಂಕ ಪಡೆದು ಸಾಧನೆ ತೋರಿದ್ದಾರೆ.

ನಿರೀಕ್ಷೆಯಂತೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ದೊರಕಿದೆ. ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.

ಗುಣಮಟ್ಟದ ಹಾಗೂ ಸ್ಪರ್ಧಾತ್ಮಕ ಶಿಕ್ಷಣದ ಫಲವಾಗಿ ಕಾಲೇಜು ಪ್ರತಿ ವರ್ಷ ಉತ್ತಮ ಫಲಿತಾಂಶ ಪಡೆಯುತ್ತಲೇ ಇದೆ. ಕೆಸಿಇಟಿ ಹಾಗೂ ನೀಟ್‍ನಲ್ಲೂ ಅತ್ಯುತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಸನ್ಮಾನ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ಸನ್ಮಾನಿಸಿ ಪ್ರೋತ್ಸಾಹಿಸಿದರು.