ದಾವಣಗೆರೆ-ಜೂ.14; ದಾವಣಗೆರೆಯ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದಿಂದ ಶೈಕ್ಷಣಿಕ ಸಾಧಕಿ ಭೂಮಿಕಾ ಆರ್. ಪೈ ಯವರಿಗೆ “ಸರಸ್ವತಿ ಪುರಸ್ಕಾರ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.2022-23ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಪರೀಕ್ಷೆಯಲ್ಲಿ ಒಟ್ಟು ಅಂಕ 625 ಕ್ಕೆ 625 ಪರಿಪೂರ್ಣ ಅಂಕ ಪಡೆದು ಸಾಧನೆ ಮಾಡಿದ ಇವರನ್ನು ದಾವಣಗೆರೆಯ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಜುಲೈಎ 30 ರಂದು ಭಾನುವಾರ ನಾಡಿನ ಗಣ್ಯ ಮಾನ್ಯರ ಸಮ್ಮುಖದಲ್ಲಿ ಬೃಹತ್ ವೇದಿಕೆಯಲ್ಲಿ ಪ್ರತ್ಯೇಕವಾದ ಸಿಂಹಾಸನದ ಮೇಲೆ ಕೂರಿಸಿ, ಕನ್ನಡದ ಕಂಕಣಕಟ್ಟಿ, ತಲೆಮೇಲೆ ಚಿನ್ನದ ಲೇಪನದ ಕಿರೀಟವಿಟ್ಟು ಪುಷ್ಪವೃಷ್ಟಿಯೊಂದಿಗೆ ಪದಕ ಸ್ಮರಣಿಕೆ, ಶೃಂಗೇರಿಯ ಶ್ರೀ ಶಾರದಾಂಬೆಯ ಸ್ಮರಣಿಕೆಯೊಂದಿಗೆ, ಅವರದೇ ಭಾವಚಿತ್ರವಿರುವ ಸನ್ಮಾನ ಪತ್ರದೊಂದಿಗೆ ಗೌರವಿಸಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ನಾಗೇಶ್ ಸಂಜೀವ ಕಿಣಿ ತಿಳಿಸಿದ್ದಾರೆ.ರಮೇಶ್ ಪೈ, ಶ್ರೀಮತಿ ರಮ್ಯ ರಮೇಶ್ ಪೈಯವರ ಸುಪುತ್ರಿಯಾದ ಇವರು ಬೆಂಗಳೂರಿನ ನ್ಯೂಮೆಕಾಲೆ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದು ಕುಮಾರಿ ಭೂಮಿಕಾ ಆರ್. ಪೈ ರವರಿಗೆ ದಾವಣಗೆರೆ ಕಲಾಕುಂಚ ಸಂಸ್ಥೆ ಮತ್ತು ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಸರ್ವ ಸದಸ್ಯರು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.