ಭೂಮಾಪನ ಇಲಾಖೆಯಲ್ಲಿ ಅಧಿಕಾರಿಗಳ ಲಂಚಾವತಾರ

ಮಾನ್ವಿ ಜೂ ೧೬ :- ತಾಲೂಕಿನ ಭೂ ಮಾಪನ ಇಲಾಖೆಯಲ್ಲಿನ ಕೆಲಸಗಳಿಗಾಗಿ ಗ್ರಾಮೀಣ ವರ್ಗದ ಹಾಗೂ ಅನಕ್ಷರಸ್ಥರು ಅಧಿಕಾರಿಗಳ ಲಂಚಗುಳಿತಕ್ಕೆ ಹಾಗೂ ವಿಳಂಬ ನೀತಿಗೆ ಬಹಳ ಪ್ರಮುಖವಾಗಿ ಅಧಿಕಾರಿ ವರ್ಗದವರ ನಿರ್ಲಕ್ಷ್ಯಕ್ಕೆ ಬೇಸತ್ತುಕೊಂಡಿರುವುದು ದುರದೃಷ್ಟಕರ ವಿಷಯವಾಗಿದೆ ಇದನ್ನು ಕೂಡಲೇ ಸರಿಪಡಿಸಿಕೊಳ್ಳದಿದ್ದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಾಗವಾರ ಬಣದಿಂದ ಉಗ್ರಸ್ವರೂಪದ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಸಂಚಾಲಕ ಚನ್ನಬಸವ ಮಾಡಗಿರಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಕರೆದು ಮಾತಾನಾಡಿದ ಅವರು ತಾಲೂಕ ಭೂ ಮಾಪನ ಇಲಾಖೆಯಲ್ಲಿ ನಡೆಯುತ್ತಿರುವ ಕರ್ಮಕಾಂಡವನೆಂದರೆ ಇನಕ್ಷೆ,ಪೋಡಿ,ಅಳಯೆ,ತಿದ್ದುಪಡಿ, ಹಿಸ್ಸಾ,ಪಾರಂ ೧೦, ಟಿಪ್ಪಣಿ, ಆಕಾರಬಂದ್, ಸೇರಿದಂತೆ ಇತರೆ ಕೆಲಸಗಳನ್ನು ಮಾಡುವುದಕ್ಕೆ ಸರ್ಕಾರಕ್ಕೆ ನೀಡಬೇಕಾದ ಹಣವನ್ನು ಕಟ್ಟಿದ್ದರೂ ಕೂಡ ವರ್ಷಾನುಗಟ್ಟಲೆ ಇಲ್ಲಸಲ್ಲದ ನೆಪವನ್ನು ಹೇಳುತ್ತಾ ಮುಂದೂಡುವ ಇಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ ಇದನ್ನು ಅಧಿಕಾರಿ ಹಣಕ್ಕಾಗಿ ಕೆಲಸವನ್ನು ಮಾಡದೇ ಬಡವರಿಗೆ ಮಾಡಿಕೊಡಬೇಕಾಗಿದೆ.
ಅರ್ಜಿ ಸಲ್ಲಿಕೆಯಾದ ೪೫ ದಿನಗಳೊಳಗಾಗಿ ಅರ್ಜಿಯನ್ನು ವಿಲೇವಾರಿ ಮಾಡಬೇಕಾಗಿದೆ ಆದರೂ ವರ್ಷಾನುಗಟ್ಟಲೆ ಕಳೆದರು ಕೂಡ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ ಹಾಗೂ ಇದರ ಮೂಲ ದಾಖಲೆಗಳಿಲ್ಲ ಎಂದು ಸುಳ್ಳು ಹೇಳಿ ಹಾಗೂ ಟಿಪ್ಪಣಿ ಬರೆಯುವುದಕ್ಕೆ ೩೦-೫೦ ಸಾವಿರ ಹಣಕ್ಕಾಗಿ ಅಧಿಕಾರಿಗಳ ಬೇಡಿಕೆ ಇಟ್ಟು ಕಾನೂನು ಬಾಹಿರ ಕೃಯ್ಯವಾಗಿದೆ ಎಂದು ಆರೋಪಿಸಿದರು.
ಕಂದಾಯ ಇಲಾಖೆ ಹಾಗೂ ಭೂ ಮಾಪನ ಇಲಾಖೆ ಒಟ್ಟೊಟ್ಟಿಗೆ ಕೂಡಿಕೊಂಡು ಅರ್ಜಿಯನ್ನು ವಿಲೇವಾರಿ ಮಾಡಬೇಕಾಗಿರುತ್ತದೆ ಹಾಗೂ ಯಾವ ಅರ್ಜಿ ಸಲ್ಲಿಸಿದರಲ್ಲಿ ಏನಾದರೂ ತಪ್ಪು ಕಂಡು ಬಂದಲ್ಲಿ ತಿದ್ದುಕೊಂಡ ಅರ್ಜಿ ಬದಲಾವಣೆ ಸಮಯ ನೀಡಬೇಕಾಗುತ್ತದೆ ಅದು ಬಿಟ್ಟು ಹಣಕ್ಕಾಗಿ ಬೇಡಿಕೆಯನ್ನು ಹೇಳುವುದರ ಮೂಲಕ ಹಳ್ಳಿಗ ಬಡ ರೈತರಿಗೆ ನುಂಗಲಾಗದ ತುತ್ತಾಗಿದೆ ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸಿದ ರೈತರ ಕೆಲಸವನ್ನು ಹಣವನ್ನು ಪಡೆಯದೆ ಬಾಕಿ ಇರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಹೋರಾಟವನ್ನು ಮಾಡಲಾಗುತ್ತದೆ ಎಂದರು..
ಈ ಸಂದರ್ಭದಲ್ಲಿ, ನರಸಿಂಹಲು ಈಟೇಕರ್, ಪರಶುರಾಮ ಅರೋಲಿ, ಹುಲಿಗೆಪ್ಪ ಅರೋಲಿ, ಹನುಮಂತ ಸಾದಾಪೂರು,
,ರಾಜಪ್ಪ ಬೈಲ್ ಮರ್ಚೇಡ್ ಇದ್ದರು.