ಭೂನಾಟಕ ಮಂಡಳಿ ನೈಜ ಘಟನೆ ಚಿತ್ರ

‘ಭೂನಾಟಕ ಮಂಡಳಿ’ ಹೆಸರಲ್ಲಿ ಚಿತ್ರ ಸದ್ದಗದ್ದಲವಿಲ್ಲದೆ ಪೂರ್ಣಗೊಂಡು ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರರಂಗದ ಹಿರಿಯ ನಿರ್ದೇಶಕ ಜಿ.ವಿ.ಅಯ್ಯರ್  ಪುತ್ರ ಜಿ.ವಿ. ರಾಘವೇಂದ್ರ ಅಯ್ಯರ್ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡಿದ್ದಾರೆ.

ನಶಿಸುತ್ತಿರುವ ಕೌಟುಂಬಿಕ ಮೌಲ್ಯಗಳ ನಡುವೆ ಮಕ್ಕಳು ಹಿರಿಯರಿಂದ ಆತ್ಮ ವಿಶ್ವಾಸ  ಹೇಗೆ ಪಡೆದು ಸಮಾಜದ ಸವಾಲುಗಳನ್ನು ಎದುರಿಸುತ್ತಾರೆ ಎಂಬ ಕಥಾನಕ ಇಟ್ಟುಕೊಂಡು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆ  ವೇಳೆ ಮಾಹಿತಿ ಹಂಚಿಕೊಂಡ‌ ನಿರ್ದೇಶಕ ರಾಘವೇಂದ್ರ ಅಯ್ಯರ್, ನೈಜಘಟನೆ ಆಧಾರಿತ ಚಿತ್ರ‌.ಮಕ್ಕಳ ಎದುರೇ ತಪ್ಪು ಮಾಡುವವರಿಗೆ  ಮಕ್ಕಳಿಂದಲೇ ಸಂದೇಶ ಸಂದೇಶ ಹೇಳುವ ಪ್ರಯತ್ನ. ತಂದೆ ತಾಯಿಗಳಿಗೆ ಅವರ ಸಿನಿಮಾ ಆಗಿ ಕಂಡರೆ, ಮಕ್ಕಳಿಗೆ ಮಕ್ಕಳ ಸಿನಿಮಾ ಥರಾನೇ ಕಾಣಿಸುತ್ತದೆ. ನಮ್ಮ ಸಂಸ್ಥೆಯಿಂದ ಪ್ರತಿವರ್ಷ ಸಿನಿಮಾ ಮಾಡುವ ಉದ್ದೇಶವಿದೆ ಇದೇ 23ಕ್ಕೆ ಬಿಡುಗಡೆಯಾಗಲಿದೆ ಎಂದರು.

ಗಾಯಕ, ಕಮ್ ನಟ ರಾಜೇಶ್ ಕೃಷ್ಣನ್ ಮಾತನಾಡಿ ಚಿತ್ರದ ಅನುಭವ ಅನ್ನುವುದಕ್ಕಿಂತ ಹೋಮ್ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡಿದಂತಾಗಿದೆ.. ಸಮಾಜ, ಮಕ್ಕಳು, ಮನೆಯ ವಾತಾವರಣ, ಆಚೆಯ ವಾತಾವರಣ ಎಲ್ಲವನ್ನೂ ಸೇರಿಸಿ ತುಂಬಾ ಶ್ರಮವಹಿಸಿ ಮಾಡಿರುವ ಮೌಲ್ಯ  ಹೊಂದಿದ ಚಿತ್ರ ಎಂದರು..

ಬಾಲ ಕಲಾವಿದ ತುಶಾರ್ , ೩ ವರ್ಷಗಳ ಹಿಂದೆಯೇ ಸಿನಿಮಾ ಆಗಿತ್ತು, ಆಗಿನ್ನೂ ನಾನು ಚಿಕ್ಕವನು. ಶೂಟಿಂಗ್ ಸಮಯದಲ್ಲಿ ನನಗೆ ಕಥೆ ಅರ್ಥವಾಗಿರಲಿಲ್ಲ, ಈಗ ಟ್ರೈಲರ್ ನೋಡಿದಾಗ ಒಂದು ಚಿತ್ರಣ ಮೂಡಿಬಂತು ಎಂದು ಹೇಳಿದರು.

ವೀಣಾರಾವ್, ಸುಜಾತ ರಾಘವೇಂದ್ರ ಅಯ್ಯರ್  ಮಾ.ಮಹೇಂದ್ರ, ಸೇರಿದಂತೆ ಬಹುತೇಕ ಚಿತ್ರತಂಡವೇ ಅಲ್ಲಿ ಹಾಜರಿತ್ತು. ಚಿತ್ರಕ್ಕೆ ಗುರುರಾಜ ಮಾರ್ಪಳ್ಳಿ ಸಂಗೀತ,  ರಾಜು ಶಿರಾಳಕೊಪ್ಪ ಕ್ಯಾಮೆರಾ ಚಿತ್ರಕ್ಕಿದೆ.