ಭೂತ್ ಸಶಕ್ತಿಕರಣ ಕಾರ್ಯಕ್ರಮ

ದಾವಣಗೆರೆ.; ದಕ್ಷಿಣ ಮಂಡಲದಲ್ಲಿ ಭೂತ್ ಸಶಕ್ತಿಕರಣ ಕಾರ್ಯಕ್ರಮದ ಪ್ರಯುಕ್ತ ತುರ್ಚಗಟ್ಟ, ಹದಡಿ, ಬಟ್ಲಕಟ್ಟೆ ಗ್ರಾಮಗಳಲ್ಲಿ ಭೂತ್’ನ ಮನೆ ಮನೆಗೆ ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ  ತೆರಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು ಮತ್ತು ಅಭಿವೃದ್ಧಿ ಕೆಲಸಗಳನ್ನು ಸಾರ್ವಜನಿಕರಿಗೆ ತಿಳಿಸಿ, ಕರಪತ್ರವನ್ನು ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷರಾದ ಯಶವಂತ ರಾವ್ ಜಾಧವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ್ ಟಿ. ದಾಸಕರಿಯಪ್ಪ, ಮಂಡಲ ಅಧ್ಯಕ್ಷರಾದ ಆನಂದ ರಾವ್ ಶಿಂಧೆ, ಧೂಡ ಮಾಜಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಸ್ಥಳೀಯ ಮುಖಂಡರು, ಭೂತ್ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.