ಭೂತಾನ್ ದೊರೆ ಭಾರತದ ಪ್ರವಾಸ

ನವದೆಹಲಿ,ಏ.೨- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಹ್ವಾನದ ಮೇರೆಗೆ ಭೂತಾನ್ ದೊರೆ ಜಿಗ್ಮೆ ಖೇಸರ್ ನಾಂಗ್ಯೆಲ್ ವಾಂಗ್‌ಚುಕ್ ಅವರು ನಾಳೆಯಿಂದ ಮೂರು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.ಭೂತಾನ್ ದೊರೆಯೊಂದಿಗೆ ಅಲ್ಲಿನ ವಿದೇಶಾಂಗ ಸಚಿವರು ಮತ್ತು ಇತರ ಹಿರಿಯ ಅಧಿಕಾರಿಗ ನಿಯೋಗ, ರಾಷ್ಟ್ರಪತಿ ದ್ರೌಪದಿ ಮುರ್ಮು , ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಮಾಲೋಚನೆ ನಡೆಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.ಭೂತಾನ್ ದೊರೆಯ ಈ ಭೇಟಿಯು ಉಭಯ ದೇಶಗಳ ನಡುವಿನ ಉನ್ನತ ಮಟ್ಟದ ದ್ವಿ ಪಕ್ಷೀಯ ಮಾತುಕತೆಗೆ ಪೂರಕವಾಗಲಿದೆ ಎಂದು ತಿಳಿಸಲಾಗಿದೆ.ಚೀನಾ ಕುರಿತಂತೆ ಭೂತಾನ್ ಪ್ರಧಾನಿ ಲೋಟೆ ತ್ಶೆರಿಂಗ್‌ಗೆ ಹೇಳಿಕೆ ಭಾರತೀಯ ಮಾಧ್ಯಮಗಳಲ್ಲಿ ಇತ್ತೀಚಿನ ವಿವಾದಕ್ಕೆ ಯಾವುದೇ ಸಂಬಂಧವಿಲ್ಲ. ಡೋಕ್ಲಾಮ್ ಟ್ರೈ-ಜಂಕ್ಷನ್ ವಿವಾದ ಪರಿಹರಿಸುವ ವಿಷಯದಲ್ಲಿ ಭೂತಾನ್‌ನ ನಿಲುವು ಬದಲಾಗಿಲ್ಲ ಎಂದು ತ್ಶೆರಿಂಗ್ ಸ್ಪಷ್ಟಪಡಿಸಿದ್ದಾರೆ.ಬೆಲ್ಜಿಯಂ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಅಥವಾ ಅವರು ಚೀನಾದೊಂದಿಗಿನ ಗಡಿ ವಿವಾದದ ಬಗ್ಗೆ ಮಾತನಾಡಿದ ಸಂದರ್ಭವನ್ನು ಉಲ್ಲೇಖಿಸದೆ ವರದಿ ಮಾಡಲಾಗಿದೆ ಎಂದು ಭೂತಾನ್ ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ.ಭಾರತ ಮತ್ತು ಚೀನಾ ೨೦೧೨ ರಲ್ಲಿ ಒಪ್ಪಂದಕ್ಕೆ ಬಂದಿದ್ದು, ತ್ರಿ-ಜಂಕ್ಷನ್ ಗಡಿ ಬಿಂದುಗಳನ್ನು ಒಳಗೊಂಡಿರುವ ಮೂರನೇ ದೇಶದೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸುವ ಉದ್ದೇಶ ಇದಾಗಿದೆ.ಥಿಂಪುವಿನಲ್ಲಿ ರಾಜತಾಂತ್ರಿಕ ಕಛೇರಿ ತೆರೆಯುವ ಚೀನಾದ ಎಲ್ಲಾ ಪ್ರಯತ್ನಗಳನ್ನು ಭೂತಾನ್ ಇಲ್ಲಿಯವರೆಗೆ ವಿರೋಧಿಸಿದೆ. “ಭಾರತ ಭೂತಾನ್‌ನ ಉನ್ನತ ವ್ಯಾಪಾರ ಪಾಲುದಾರರಾಗಿದ್ದು, ಭೂತಾನ್‌ನಲ್ಲಿ ಹೂಡಿಕೆಯ ಪ್ರಮುಖ ಮೂಲವಾಗಿ ಉಳಿದಿದೆ ಎಂದು ತಿಳಿಸಿದೆ.