ಭೂತಾನ್ -ಚೀನಾ ಚರ್ಚೆ ಭಾರತದ ನಿಗಾ

ನವದೆಹಲಿ,ಅ.೨೫- ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಭೂತಾನ್ ವಿದೇಶಾಂಗ ಸಚಿವ ತಂದಿ ದೋರ್ಜಿ ಈ ವಾರ ಉಭಯ ದೇಶಗಳ ಗಡಿ ವಿವಾದಕ್ಕೆ ಚರ್ಚೆ ನಡೆಸಲು ಭೇಟಿಯಾಗುತ್ತಿರುವುದನ್ನು ಭಾರತ ಸೂಕ್ಷ್ಮ ವಾಗಿ ಗಮನಿಸುತ್ತಿದೆ.
ಚೀನಾ ಮತ್ತು ಭೂತಾನ್ ತಮ್ಮ ದೇಶಗಳ ಗಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಎರಡೂ ದೇಶಗಳ ವಿದೇಶಂಗ ಸಚಿವರ ಸಭೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಕುತೂಹಲ ಮತ್ತು ಎಚ್ಚರಿಕೆಯಿಂದ ನೋಡುತ್ತಿದೆ.
ಚೀನಾ ಮತ್ತು ಭೂತಾನ್ ನಡುವಿನ ಸೂಕ್ಷ್ಮ ಡೋಕ್ಲಾಮ್ ವಿವಾದ ಮತ್ತು ಭೂತಾನ್-ಚೀನಾ-ಭಾರತ ತ್ರಿ-ಜಂಕ್ಷನ್‌ನ ನಿರ್ಣಯದ ಸಂದರ್ಭದಲ್ಲಿ, ಭದ್ರತಾ ಪರಿಸ್ಥಿತಿಯ ಮೇಲೆ ಯಾವುದೇ ಪರಿಣಾಮ ಬೀರುತ್ತದೆಯೇ ಎಂದು ನೋಡಲು ಭಾರತ ಸರ್ಕಾರ ಮಾತುಕತೆ ಎದುರು ನೋಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
೨೦೧೨ ರ ಒಪ್ಪಂದ ದ ಪ್ರಕಾರ, ಭಾರತ, ಚೀನಾ ಮತ್ತು ಮೂರನೇ ದೇಶಗಳ ನಡುವಿನ ಟ್ರೈ-ಜಂಕ್ಷನ್ ಗಡಿ ಬಿಂದುಗಳನ್ನು ಸಂಬಂಧಿಸಿದ ದೇಶಗಳೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಬೇಕು ಎಂದು ಭಾರತ, ಚೀನಾಕ್ಕೆ ಪದೇ ಪದೇ ನೆನಪಿಸುತ್ತಿದೆ ಎಂದು ತಿಳಿಸಿದೆ.
ಭೂತಾನ್ ದೇಶದೊಂದಿಗೆ ಗಡಿ ವಿವಾದವನ್ನು ಶೀಘ್ರದಲ್ಲೇ ಪರಿಹರಿಸಲು ಎದುರು ನೋಡುತ್ತಿವೆ. ಜೊತೆಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಲು ಬಯಸುತ್ತಿದ್ದೇವೆ ಎಂದು ಚೀನಾ ಹೇಳಿದೆ.
ಭೂತಾನ್ ನೊಂದಿಗೆ ಚೀನಾ’, ಉತ್ತಮ ಸಂಬಂಧ ಹೊಂದಲು ಬಯಸುತ್ತದೆ. ಮತ್ತು ಗಡಿ ಸಮಸ್ಯೆಯ ಆರಂಭಿಕ ಇತ್ಯರ್ಥ ಪಡಿಸಲು ಕೆಲಸ ಮಾಡಲು ಉದ್ದೇಶಿಸಿದೆ ಎಂದು ಹೇಳಿದೆ.
ಭೂತಾನ್ ಈ ವರ್ಷ ಹಲವಾರು ಸಂದರ್ಭಗಳಲ್ಲಿ ಚೀನಾದೊಂದಿಗಿನ ತನ್ನ ಗಡಿ ವಿವಾದವನ್ನು ಪರಿಹರಿಸಲು ಬಹಳ ಹತ್ತಿರದಲ್ಲಿದೆ ಮತ್ತು ಈ ವಿಷಯದ ಬಗ್ಗೆ ಬೀಜಿಂಗ್‌ನೊಂದಿಗೆ ಯಾವುದೇ ದೊಡ್ಡ ಸಮಸ್ಯೆ ಇಲ್ಲ ಎಂದು ಹೇಳಿದೆ. ಗಡಿ ಮಾತುಕತೆಗಳ ತೀರ್ಮಾನ ಮತ್ತು ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯು ಭೂತಾನ್‌ನ ದೀರ್ಘ ಕಾಲೀನ ಮತ್ತು ಮೂಲಭೂತ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಪೂರೈಸುತ್ತದೆ ಎಂದು ಭೂತಾನ್ ವಿದೇಶಾಂಗ ಸಚಿವ ದೋರ್ಜಿಗೆ ವಾಂಗ್ ಹೇಳಿದ್ದಾರೆ.