ಭೂತಾನ್‌ನಲ್ಲಿ ಮೋದಿಗೆ ಅದ್ಧೂರಿ ಸ್ವಾಗತ

ಥಿಂಪು,ಮಾ.೨೨:ಎರಡು ದಿನಗಳ ಭೇಟಿಗಾಗಿ ಭೂತಾನ್‌ಗೆ ತೆರಳಿರುವ ಪ್ರಧಾನಿ ನರೇಂದ್ರಮೋದಿ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದೆ. ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್‌ಗೆ ಅವರು ಮೋದಿ ಅವರನ್ನು ಆಲಂಗಿಸಿಕೊಂಡು ನನ್ನ ಹಿರಿಯ ಸಹೋದರ ನಿಮಗೆ ಸ್ವಾಗತ ಎಂದು ಬಣ್ಣಿಸಿದ್ದಾರೆ.
ಮಾ. ೨೧ ಹಾಗೂ ೨೨ ರಂದು ಪ್ರಧಾನಿ ಅವರು ಭೂತಾನ್‌ಗೆ ಭೇಟಿ ನೀಡಬೇಕಾಗಿತ್ತು. ಆದರೆ, ಹವಾಮಾನ ವೈಪ್ಯರೀತ್ಯದಿಂದಾಗಿ ಈ ಭೇಟಿಯನ್ನು ಮುಂದೂಡಲಾಗಿತ್ತು. ಭೂತಾನ್ ವಿಮಾನನಿಲ್ದಾಣದಲ್ಲಿ ಬಂದಿಳಿದ ನರೇಂದ್ರಮೋದಿ ಅವರಿಗೆ ಗೌರವ ರಕ್ಷೆ ನೀಡಲಾಯಿತು.
ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಮೋದಿ ಭೇಟಿಯಿಂದಾಗಿ ಭೂತಾನ್ ಜನತೆ ಅತೀವ ಸಂತಸಗೊಂಡಿದ್ದು, ಮೋದಿ ಅವರು ಭೂತಾನ್‌ಗೆ ಭೇಟಿ ನೀಡಿರುವುದು ತುಂಬಾ ಸಂತೋಷವಾಗಿದೆ ಎಂದು ಮಗು ಬಣ್ಣಿಸಿದೆ.
ಇದೇ ವೇಳೆ ಉಭಯ ದೇಶದ ನಾಯಕರು ನಿಯೋಗ ಮಟ್ಟದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.