ಭೂಗಳ್ಳರಿಂದ ಮಾವಿನಕೆರೆ ಅತಿಕ್ರಮ -ರಾಜೇಶ್ ಆರೋಪ

ರಾಯಚೂರು.ಮಾ.೨೪-ಐತಿಹಾಸಿಕ ಹಿನ್ನಲೆ ಹೊಂದಿದ ಮಾವಿನಕೆರೆಯನ್ನು ಕೆಲವು ಭೂಗಳ್ಳರು ಕೆರೆಯನ್ನು ಮುಚ್ಚಲು ಮುಂದಾಗಿದ್ದಾರೆ ಎಂದು ಕ್ರಾಂತಿಯೋಗಿ ಶ್ರೀ ಬಸವೇಶ್ವರ ಸೇವಾ ಸಂಘದ ಜಿಲ್ಲಾಧ್ಯಕ್ಷ ಕೆ.ರಾಜೇಶ್ ಕುಮಾರ ಅವರು ಆರೋಪಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ನಗರದ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ್ದ ಮಾವಿನ ಕೆರೆಯನ್ನು ಮುಚ್ಚಲು ಮುಂದಾಗಿದ್ದಾರೆ ಸರ್ವೇ ನಂ.೧೨೩೦,೧೨೩೧,೧೨೩೨, ರ ವಿಸ್ಥಿರ್ಣ ೩ ಎಕರೆ ೩೩ ಗುಂಟೆ ಈ ಸ್ಥಳವನ್ನು ಎನ್.ಎ. ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರು ಮಾಡಬಾರದು ಕೆರೆಗಳಲ್ಲಿ ಲೇಔಟ್ ಗಳನ್ನು ಮಾಡಿದ ನಂತರ ಖರೀದಿದಾರರು ಕಟ್ಟಡಗಳನ್ನು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಅವರ ಮನೆಗಳು ಕುಶಿಯುತ್ತವೆ ಇದರಿಂದ ಈ ಭೂಮಿಯನ್ನು ಪಟ್ಟ ಭೂಮಿ ಎಂದು ಹೇಳುತ್ತಾರೆ.
ಐತಿಹಾಸಿಕ ಇತಿಹಾಸವುಳ್ಳ ಮಾವಿನ ಕೆರೆಯನ್ನು ಭೂಗಳ್ಳರು ಜೆಸಿಬಿ ಗಳನ್ನು ತೆಗೆದುಕೊಂಡು ಮರಳು,ಕಲ್ಲು ಹಾಕಿ ಮುಚ್ಚಲು ಮುಂದಾಗಿದ್ದಾರೆ ಈ ಕುರಿತು ನಗರ ಸಭೆ ಅಧಿಕಾರಿಗಳಿಗೆ ಮೌಖಿಕವಾಗಿ ಸುಮಾರು ಬಾರಿ ತಿಳಿಸಲಾಯಿತು ಆದರೆ ಯಾವುದೇ ಪ್ರಯೋಜನವಾಗಿಲ್ಲ.ಕೆರೆ ಮುಚ್ಚಲು ಮುಂದಾಗಿದ್ದ ಜೆಸಿಬಿ ಗಳ ದಾಖಲಾತಿಯನ್ನು ಜಿಲ್ಲಾಡಳಿತಕ್ಕೆ ಲಿಖಿತ ರೂಪದಲ್ಲಿ ನೀಡುತ್ತೇನೆ ಕೂಡಲೇ ವಾಹನವನ್ನು ಜಪ್ತಿ ಮಾಡಬೇಕು, ಕೆರೆ ಒತ್ತುವರಿ ಆದರೆ ನಗದರ ಜಾಹಿರಬಾದ್,ಸಿಯಾತಲಭ ಸೇರಿದಂತೆ ಹಾಲವರು ಬಡವಣೆಗಳು ಜಲಾವೃತ ಅವಾಗುತ್ತವೆ.
ಇಂದು ಜಿಲ್ಲಾ ಪೊಲೀಸ್ ಇಲಾಖೆಯ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ.ವರಿಷ್ಠಾಧಿಕಾರಿಗಳು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸೂಕ್ತ ಮಾರ್ಗದರ್ಶನ ನೀಡಿ ಭೂ ಗಳ್ಳರನು ಬಂಧಿಸಿ ಜಿಸಿಬಿಗಳನ್ನು ಜಪ್ತಿ ಮಾಡಬೇಕು ಇಲ್ಲವಾದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದರು.