ಭೂಗತ ಲೋಕದ ಹಿಟ್ಲರ್

ಗೀತ ರಚನೆಕಾರ ಕಿನ್ನಾಳ್ ರಾಜ್ ಚಿತ್ರರಂಗದಲ್ಲಿ ಬಡ್ತಿ ಪಡೆದಿದ್ದಾರೆ.ಅದುವೇ ” ಹಿಟ್ಲರ್ ” ಚಿತ್ರದ ಮೂಲಕ.
ಅರೆ ಏನು? ಚಿತ್ರರಂಗದಲ್ಲಿ ಯಾವ ಬಡ್ತಿ ಅಂತೀರಾ..‌ಕಿನ್ನಾಳ್ ರಾಜ್ ನಿರ್ದೇಶಕರಾಗಿ ಮೊದಲ‌ ಬಾರಿಗೆ ಚಿತ್ರರಂಗದಲ್ಲಿ ಅದೃಷ್ಟ‌ ಕಂಡುಕೊಳ್ಳಲು ಮುಂದಾಗಿದ್ದಾರೆ.
ಭೂಗತ ಲೋಕದಲ್ಲಿ ಅನಾಥ ಹುಡುಗನೊಬ್ಬ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿಕೊಂಡು ಮುಂದೆ ಹೇಗೆ ತನ್ನ ಪಾರುಪಥ್ಯವನ್ನು ಸಾಧಿಸುತ್ತಾನೆ ಎನ್ನುವುದು ಒಂದು ಏಳೆಯ ಕತೆಯನ್ನು ಇಟ್ಟುಕೊಂಡು ಸಿನಿಮಾವನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ.
ಜೊತೆಗೆ ಒಂದಷ್ಟು ಭಾವನಾತ್ಮಕ ಸನ್ನಿವೇಶಗಳು, ಹಾಸ್ಯ ಮಿಳಿತಗೊಂಡಿದೆ. ಪಕ್ಕಾ ರೌಡಿಸಂ ಗಾಥೆ ಆಗಿದ್ದು, ಯಾವುದೇ ವ್ಯಕ್ತಿಯ ನೈಜ ಘಟನೆಯನ್ನು ಆಯ್ದುಕೊಂಡಿರುವುದಿಲ್ಲ. ಎಲ್ಲವನ್ನು ಕಾಲ್ಪನಿಕವಾಗಿ ಮನರಂಜನೆ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದ್ದು, ಅಂತಿಮವಾಗಿ ತೂಕದ ಸಂದೇಶ ಇರಲಿದೆ. ಅದು ಏನು ಎಂಬುದನ್ನು ಟಾಕೀಸ್‌ದಲ್ಲಿ ನೋಡಬೇಕಾಗಿದೆ ಎನ್ನುತ್ತಾರೆ ಕಿನ್ನಾಳ್ ರಾಜ್.
ನಟ ಶ್ರೀಮುರಳಿ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ತಂಡಕ್ಕೆ ಶುಭ ಹಾರೈಸಿರುವುದು ಪ್ಲಸ್ ಪಾಯಿಂಟ್.
ಲೋಹಿತ್ ನಾಯಕ, ಸಸ್ಯ ನಾಯಕಿ. ಬಲರಾಜವಾಡಿ, ವರ್ಧನ್‌ತೀರ್ಥಹಳ್ಳಿ, ವಿಜಯ್‌ಚಂಡೂರ್, ವೈಭವ್‌ನಾಗರಾಜ್, ಮನಮೋಹನ್‌ರೈ, ಗಣೇಶ್‌ರಾವ್‌ಕೇಸರ್‌ಕರ್, ವೇದಹಾಸನ್ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಆಕಾಶ್‌ಪರ್ವ ಸಂಗೀತ, ಜಿ.ವಿ.ನಾಗರಾಜಕಿನ್ನಾಳ ಛಾಯಾಗ್ರಹಣವಿದೆ.
ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡು, ಫೈಟ್‌ನ್ನು ಸಂಡೂರುದಲ್ಲಿ ಚಿತ್ರೀಕರಿಸಲು ಯೋಜನೆ ರೂಪಿಸಿಕೊಂಡಿದ್ದಾರೆ. ಮಮತಾಲೋಹಿತ್ ನಿರ್ಮಾಣ ಮಾಡಿದ್ದು ಸದ್ಯದಲ್ಲೆ ಟೀಸರ್ ಬಿಡುಗಡೆ ಮಾಡಲು ತಂಡ ಯೋಜನೆ ಹಾಕಿಕೊಂಡಿದೆ.