ಭೂಕುಸಿತ ೧೨ ಮಂದಿ ಸಾವು

ಜಕಾರ್ತ, ಜ ೧೨- ಭಾರೀ ಮಳೆಯಿಂದಾಗಿ ಭೂ ಕುಸಿತ ಉಂಟಾಗಿ ೧೩ ಮಂದಿ ಮೃತಪಟ್ಟಿದ್ದು ೨೬ ಮಂದಿ ಗಾಯಗೊಂಡಿರುವ ಘಟನೆ ಇಂಡೋನೇಶಿಯಾದ ಸುಮೇದಾಂಗ್ ಜಿಲ್ಲೆಯಲ್ಲಿ ಸಂಭವಿಸಿದೆ.
ಪಶ್ಚಿಮ ಜಾವಾದ ಸಿಂಜಾನುಜುಂಗ್ ಗ್ರಾಮದಲ್ಲೂ ಭೂ ಕುಸಿತ ಉಂಟಾಗಿದೆ. ನಾಪತ್ತೆಯಾಗಿರುವ ೨೬ ಜನರಿಗಾಗಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.
ಈ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗೆ ಅಡ್ಡಿಯುಂಟಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ರಾದಿತ್ಯ ಜಾಥಿ ಹೇಳಿದ್ದಾರೆ.
ಸಾವಿನ ಸಂಖ್ಯೆ ಇನ್ನೂ ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.