ಭೂಕಬಳಿಕೆದಾರರ ವಿರುದ್ದ ಕ್ರಮಕ್ಕೆ ಬೆಂಗಳೂರು ಚಲೋ

ಬೆಂಗಳೂರು.ಜು೨೦:ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ರಾಜ್ಯಾಧ್ಯಕ್ಷರಾದ ನಿಂಗರಾಜ್ ಗೌq ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಭೂಕಬಳಿಕೆದಾರರ ವಿರುದ್ದ ಕ್ರಮಕ್ಕೆ ಅಗ್ರಹಿಸಿ ದೇವನಹಳ್ಳಿಯಿಂದ ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ದೇವನಹಳ್ಳಿ ಸುತ್ತಮುತ್ತಲು ಇರುವ ಸರ್ಕಾರಿ ಜಾಗ,ರಾಜಕಾಲುವೆ ಮತ್ತು ಸ್ಮಶಾನ ಭೂಮಿ ,ದೇವಸ್ಥಾನ ಜಾಗಗಳನ್ನು ಭೂಕಬಳಿಕೆದಾರರು,ಅಧಿಕಾರಿಗಳ ಜೊತೆಯಲ್ಲಿ ಶಾಮೀಲಾಗಿ ಸರ್ಕಾರ ಕೊಟ್ಯಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ .ದೇವನಹಳ್ಳಿಯ ರಾಯಸಂದ್ರದಲ್ಲಿ ಸರಿ ಸುಮಾರು ನೂರಾರು ಕುಟುಂಬಗಳು ಮತ್ತು ರೈತಾಪಿ ವರ್ಗದವರು ,ದಲಿತ ಸಮುದಾಯದವರು ಗುಡಿಸಲುಗಳನ್ನು ಹಾಕಿಕೊಂಡು ಹಲವಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ರಾಜ್ಯಾಧ್ಯಕ್ಷರಾದ ನಿಂಗರಾಜ್ ಗೌಡ ಆರೋಪಿಸಿದರು.
ಆಧಾರ ಕಾರ್ಡ್,ವಿದ್ಯುತ್ ಸಂಪರ್ಕವಿದೆ ನಾವು ವಾಸ ಮಾಡುವ ಜಾಗವನ್ನು ನಮಗೆ ನೆಲಸಲು ಅವಕಾಶ ಮಾಡಿಕೊಡಿ ಎಂದು ಹಲವಾರು ವರ್ಷಗಳಿಂದ ಮನವಿ ಮಾಡಿದರು ಅದರೆ ಕೆಲವು ಪಟ್ಟಭದ್ರ ಹಿತಾಸಕ್ತಿ ವ್ಯಕ್ತಿಗಳು ,ಅಧಿಕಾರಿಗಳ ಜೊತೆಯಲ್ಲಿ ಸೇರಿಕೊಂಡು ಸ್ವತ್ತಿನ ಸ್ಕೆಚ್ ಅನ್ನು ಬದಲಾವಣೆ ಮಾಡುತ್ತಿದ್ದಾರೆ.ಕೆಲವು ಭೂಕಬಳಿಕೆದಾರರು,ಅಧಿಕಾರಿಗಳ ಜೊತೆಯಲ್ಲಿ ಸೇರಿಕೊಂಡು ಬಡವರ ಮೇಲೆ ದೌರ್ಜನ್ಯ ವೆಸಗುತ್ತಿದ್ದಾರೆ ರಾಯಸಂದ್ರ ೪೦ಮಹಿಳೆಯರನ್ನ ಪೊಲೀಸ್ ಠಾಣೆಗೆ ಕರೆಸಿ ವಿನಾಕಾರಣ ಕಿರುಕುಳ ಕೊಡುತ್ತಿದ್ದಾರೆ.
ಇದರ ವಿರುದ್ದ ಇಂದು ದೇವನಹಳ್ಳಿಯಲ್ಲಿರುವ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಿಂದ ಸಾವಿರಾರು ಕಾರ್ಯಕರ್ತರಿಂದ ಬೆಂಗಳೂರು ಚಲೋ ಮೂಲಕ ಭೂಕಬಳಿಕೆದಾರರು ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಮತ್ತು ಭ್ರಷ್ಟಚಾರ ನಿಗ್ರಹ ದಳಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.