ಭೂಕಂಪನ ಶಬ್ದ ಪೀಡಿತ ಗ್ರಾಮಕ್ಕೆ ಸಂಸದ ಜಾಧವ ಭೇಟಿ

ಚಿಂಚೋಳಿ,ನ.3- ತಾಲೂಕಿನ ಭೂಕಂಪನ ಪೀಡಿತ ಗ್ರಾಮಗಳಾದ ದಸ್ತಾಪೂರ ಹಾಗೂ ಐ.ಪಿ.ಹೊಸಳ್ಳಿ ಗ್ರಾಮಕ್ಕೆ ಸಂಸದ ಡಾ.ಉಮೇಶ ಜಾಧವ ಭೇಟಿ ನೀಡಿ ಗ್ರಾಮಸ್ಥರಿಂದ ಭೂಕಂಪನದಿಂದ ಬರುವ ಶಬ್ದದ ಕುರಿತು ಮಾಹಿತಿ ಪಡೆದರು.
ಈ ಗ್ರಾಮದಲ್ಲಿ ಭೂಮಿಯಿಂದ ವಿಚಿತ್ರ ಶಬ್ದ ಕೇಳಿಬರುತ್ತಿರುವ ವಿಷಯವನ್ನರಿತ ಸಂಸದರಾದ ಡಾ ಉಮೇಶ ಜಾಧವ ಅವರು, ಗ್ರಾಮಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಸಿದ ಅವರಿಗೆ ಗ್ರಾಮಸ್ಥರು ತಮ್ಮಲ್ಲಿ ಆವರಿಸಿರುವ ಆತಂಕದ ಕುರಿತು ಅಳಲನ್ನು ತೋಡಿಕೊಂಡರು.
ನಮ್ಮ ಈ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ದಿನಕ್ಕೆ ಎರಡು ಮೂರು ಬಾರಿ ಭೂಮಿಯಿಂದ ವಿಚಿತ್ರ ಶಬ್ದ ಬರುತ್ತಿದ್ದು. ನಮ್ಮಗೆ ಯಾವಾಗ ಏನೋ ಆಗುತ್ತದೆ ಎಂಬ ಭಯದಲ್ಲಿ ರಾತ್ರಿ ಹಗಲು ನಿದ್ದೆ ಇಲ್ಲದೆ ಬದುಕು ಸಾಗಿಸುತ್ತ ಇದ್ದೆವೆ. ತಾವು ನಮ್ಮ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಂಸದರ ಮುಂದೆ ತಮ್ಮ ಆಳಲನ್ನು ತೋಡಿಕೊಂಡರು.
ಈ ಕುರಿತು ಸಂಸದ ಡಾ.ಜಾಧವ ಅವರು, ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಫೆÇೀನ್ ಮಾಡಿ ಮಾತನಾಡಿ ಕಳೆದ ಹಲವು ದಿನಗಳಿಂದ ಈ ಎರಡು ಗ್ರಾಮಗಳಲ್ಲಿ ಭೂಮಿಯಿಂದ ವಿಚಿತ್ರ ಶಬ್ದ ಬರುತ್ತಿದ್ದು ಜನರು ಆತಂಕದಿಂದ ಭಯ-ಭೀತರಾಗಿದ್ದಾರೆ ಕೂಡಲೇ ಗ್ರಾಮಕ್ಕೆ ಆಗಮಿಸಿ ಭೂ ಕಂಪನದ ರಿಕ್ಟರ್ ಮಾನವನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಕಂಪನದ ನಿಖರ ಮಾಹಿತಿಯನ್ನು ಪಡೆಯಲು ಸಾಧ್ಯವಿದದೆ ಎಂದು ಸೂಚಿಸಿದರು.
ಅವರೊಂದಿಗೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅನೀಲಕುಮಾರ ರಾಠೋಡ.ತಾಲೂಕ ಬಿಜೆಪಿ ಪಕ್ಷದ ಅಧ್ಯಕ್ಷರಾದ ಸಂತೋಷ ಗಡಂತಿ. ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಜಗದೀಶಸಿಂಗ ಠಾಕೂರ.ತಾಲೂಕ ಪಂಚಾಯತ ಸದಸ್ಯರಾದ ಪ್ರೇಮಸಿಂಗ ಜಾಧವ. ಬಿಜೆಪಿ ಮುಖಂಡರಾದ ಶರಣಪ್ಪ ತಳವಾರ. ಭೀಮಶೆಟ್ಟಿ ಮುರಡ.ಲಕ್ಷ್ಮಣ ಅವುಂಟಿ.ಅಶೋಕ ಚವ್ಹಾಣ.ಶ್ರೀಮಂತ ಕಟ್ಟಿಮನಿ. ರವಿಕಾಂತ ಹೊಸಭಾವಿ.ಶಿವಯೋಗಿ ರುಸ್ತಂಪೂರ. ಶ್ರೀನಿವಾಸ್ ಚಿಂಚೋಲಿಕರ್.ಪವನ ಕುಮಾರ ಗೋಪನಪಳ್ಳಿ. ಅಭೀಷೇಕ ಮಲಕನೂರ. ಚಂದ್ರಶೆಟ್ಟಿ ಜಾಧವ. ಸತೀಶರೆಡ್ಡಿ ತಾದಲಾಪೂರ. ರೇವಣಸಿದ್ದ ಬಡಾ.ರಾಮರೆಡ್ಡಿ ಪಾಟೀಲ. ಜಗನ್ನಾಥ ಪೂಜಾರಿ. ಮತ್ತು ಗ್ರಾಮಸ್ಥರು ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.