ಭುವನೇಶ್ವರ್ ಕುಮಾರ್ ಗೆ ತಿಂಗಳ ಐಸಿಸಿ ಪ್ರಶಸ್ತಿ

ದು‌ಬೈ, ಏ.13- ಭಾರತೀಯ ಕ್ರಿಕೆಟ್‌ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಗೆ ಐಸಿಸಿ ತಿಂಗಳ ಆಟಗಾರರ ಪ್ರಶಸ್ತಿ ಲಭಿಸಿದೆ.
ಐಸಿಸಿ ತಿಂಗಳ ಆಟಗಾರರ ಪಟ್ಟಿಯಲ್ಲಿ ಸತತ ಮೂರನೇ ಬಾರಿಗೆ ಬಾರತೀಯ ಆಟಗಾರ ತಿಂಗಳ ಪ್ರಶಸ್ತಿ ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಗಾಯಾಳುವಾಗಿದ್ದ ಅವರು ಹಲವು ಸಮಯದಿಂದ ದೂರ‌ ಉಳಿದಿದ್ದರು. ಭಾರತ ತಂಡಕ್ಕೆ ಪುನರ್ ಆಗಮನದ ಬೆನ್ನಲ್ಲೇ ಅವರಿಗೆ ಪ್ರಶಸ್ತಿ ಲಭಿಸಿದೆ.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ದದ ಟಿ-20 ಮತ್ತು ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದರು.

ಮೂರು ಪಂದ್ಯಗಳ ಏಕದಿನ ಪಂದ್ಯಗಳಲ್ಲಿ 31 ವರ್ಷದ ಭುವನೇಶ್ವರ್ ಕುಮಾರ್4.65 ರನ್ ಸರಾಸರಿಯಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದರು. ಹಾಗೆಯೇ ಐದು ಪಂದ್ಯಗಳ ಟಿ20 ಸರಣಿಯಲ್ಲಿ 6.38 ಸರಾಸರಿಯಲ್ಲಿ ನಾಲ್ಕು ವಿಕೆಟ್‌ಗಳನ್ನು ಗಳಿಸಿ ಭಾರತದ ಸರಣಿ ಗೆಲುವಿಗೆ ಕೊಡುಗೆ ನೀಡಿದ್ದರು.

ಅತ್ಯಂತ ನೋವಿನ ದೀರ್ಘ ಅಂತರದ ಬಳಿಕ ಭಾರತಕ್ಕೆ ಮತ್ತೆ ಆಡಲು ಸಾಧ್ಯವಾಗಿದ್ದು ಅತ್ಯಂತ ಖುಷಿ ನೀಡಿದೆ. ಈ ಸಮಯದಲ್ಲಿ ನಾನು ಫಿಟ್ನೆಸ್ ಹಾಗೂ ಕೌಶಲ್ಯ ವೃದ್ಧಿಯತ್ತ ಗಮನ ಹರಿಸಿದ್ದೆ. ದೇಶಕ್ಕಾಗಿ ಮತ್ತೆ ವಿಕೆಟ್ ಗಳಿಸಲು ಸಾಧ್ಯವಾಗಿರುವುದು ತೃಪ್ತಿ ನೀಡಿದೆ ಎಂದು ಕುಮಾರ್ ನೀಡಿರುವ ಹೇಳಿಕೆಯನ್ನು ಐಸಿಸಿ ಪ್ರಕಟಿಸಿದೆ.

ಜನವರಿ ತಿಂಗಳಲ್ಲಿ ರಿಷಭ್ ಪಂತ್ ಮತ್ತು ಫೆಬ್ರವರಿ ತಿಂಗಳಲ್ಲಿ ರವಿಚಂದ್ರನ್ ಅಶ್ವಿನ್ ಪ್ರಶಸ್ತಿ ಗಳಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.