ಭುವನಂ ಫೌಂಡೆಷನ್‍ದಿಂದ ಆಹಾರ ಧಾನ್ಯ ಕಿಟ್ ವಿತರಣೆ

ಕಲಬುರಗಿ,ಜೂ.9- ಕೋವಿಡ ಎರಡನೆ ಅಲೆಯ ಸಂಕಷ್ಟದಲ್ಲಿ ಸಿಲುಕಿರುವ ಇಲ್ಲಿನ ಬಡ ಕುಟುಂಬಗಳಿಗೆ ಬೆಂಗಳೂರಿನ ಭುವನಂ ಫೌಂಡೆಷನ್ ವತಿಯಿಂದ ಆಹಾರ ಧಾನ್ಯ ಕಿಟ್‍ಗಳನ್ನು ಇಂದಿಲ್ಲಿ ವಿತರಣೆ ಮಾಡಲಾಯಿತು.
ಮಹಾನಗರದ ಪೋಸ್ಟ್ ಹೆಡ್ ಆಫೀಸ ಬಳಿಯ ಅಲೆಮಾರಿ ಕುಟುಂಬಗಳಿಗೆ, ಬೀದಿ ವ್ಯಾಪಾರಿಗಳಿಗೆ, ಮಹಾದೇವ ನಗರದ ಕೋವಿಡ ಸಂತ್ರಸ್ಥರಿಗೆ ಒಂದು ತಿಂಗಳದ ಆಹಾರ ಧಾನ್ಯಗಳ ಕಿಟ್‍ಗಳನ್ನು ಬಹುಭಾಷ ಖ್ಯಾತ ನಟಿ ಹರ್ಷಿತಾ ಪೂಣಚ್ಚ ಮತ್ತು ನಟ ಭುವನ ಅವರು ವಿತರಿಸಿದರು.
ಕೋವಿಡ ಮಾರ್ಗಸೂಚಿಯನ್ನು ಅನುಸರಿಸುವ ಮೂಲಕ ಮಹಾಮಾರಿ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದ್ದು, ತಮ್ಮ ಆರೋಗ್ಯ ಮತ್ತು ಜೀವದ ರಕ್ಷಣೆ ತಮ್ಮ ಕೈಯಲ್ಲಿದೆ ಎಂದು ಕೋರೊನಾ ಸೋಂಕಿನ ಕುರಿತು ಅವರಿಗೆ ಜಾಗೃತಿ ಮೂಡಿಸಿದರು.
ಕೋವಿಡ ಲಾಕ್‍ಡೌನ್ ಪರಿಣಾಮವಾಗಿ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಕಲಬುರಗಿಯ ಬಡಜನರ ಸೇವೆ ಮಾಡಲು ದೂರದ ಬೆಂಗಳೂರಿನಿಂದ ಬಂದ ಭುವನಂ ಫೌಂಡೆಷನ್ ತಂಡ ಇಲ್ಲಿ ಆಹಾರ ಧಾನ್ಯಗಳನ ಕಿಟ್‍ಗಳನ್ನು ವಿತರಿಸುವ ಮೂಲಕ ಮಾನವೀಯ ಸೇವೆ ಕೈಗೊಂಡಿದ್ದಾರೆ ಎಂದು ಇಲ್ಲಿನ ಖ್ಯಾತ ಉದ್ದಿಮೆದಾರ ಬಾಲರಾಜ ಗುತ್ತೇದಾರ ಮತ್ತು ವೀರ ಕನ್ನಡಿಗರ ಸೇನೆ ಅಧ್ಯಕ್ಷ ಅಮೃತ ಪಾಟೀಲ ಸಿರನೂರ ಅವರು ಮೆಚ್ಚಿಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅನೀಲ ತಳವಾರ, ಪ್ರಶಾಂತ ಬಾಚನಾಳ, ಶಿವಾನಂದ ಚಿಕ್ಕಣಿ, ಶ್ರವಣ ಸುಲ್ತಾಪೂರ ಸೇರಿಂತೆ ಭವನಂ ತಂಡದ ಕಾರ್ಯಕರ್ತರು ಪಾಲ್ಗೊಂಡಿದ್ದರು