
ಪ್ರತಿಭಾನ್ವಿತ ನಿರ್ದೇಶಕ ಗಿರೀಶ್ ಮೂಲಿಮನಿ ಆಕ್ಷನ್ ಕಟ್ ಹೇಳುತ್ತಿರುವ ‘ಭುವನಂ ಗಗನಂ’ ಚಿತ್ರ ಈಗಾಗಲೇ ಅರ್ದಕ್ಕಿಂತ ಹೆಚ್ಚು ಭಾಗದ ಚಿತ್ರೀಕರಣ ನಡೆಸಿ ಉಳಿದ ಭಾಗದ ಚಿತ್ರೀಕರಣಕ್ಕೆ ಸಿದ್ದತೆ ಮಾಡಿಕೊಂಡಿದೆ..
ಬೆಂಗಳೂರು, ಮೈಸೂರು ಸುತ್ತಮುತ್ತ 40 ದಿನಗಳ ಚಿತ್ರೀಕರಣ ಪೂರ್ಣ ಮಾಡಿದ್ದು .ಮಂಗಳೂರು, ಕನ್ಯಾಕುಮಾರಿ, ಬೆಂಗಳೂರಿನಲ್ಲಿ ಮುಂದಿನ ಹಂತದ ಚಿತ್ರೀಕರಣವನ್ನು ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಪೃಥ್ವಿ ಅಂಬರ್, ಮತ್ತು ಪ್ರಮೋದ್ ನಾಯಕ ನಟರಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಎಂ.ಮುನೇಗೌಡ ಬಂಡವಾಳ ಹಾಕಿದ್ದಾರೆ. ನಿರ್ಮಾಪಕರ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಎಲ್ಲರ ಗಮನ ಸೆಳೆದಿದೆ. ಈ ಮೂಲಕ ನಿರ್ಮಾಪಕರ ಹುಟ್ಟಹಬ್ಬಕ್ಕೆ ತಂಡ ಉಡುಗೊರೆ ನೀಡಿದೆ.
ಕಳೆದ ವರ್ಷ ಸೆಟ್ಟೇರಿರುವ ‘ಭುವನಂ ಗಗನಂ’ ಸಿನಿಮಾ ಈಗಾಗಲೇ ಶೇಕಡ 60ರಷ್ಟು ಚಿತ್ರೀಕರಣ. ಮುಗಿಸಿದೆ. ‘ಭುವನಂ ಗಗನಂ’ ಲವ್ ಸಬ್ಜೆಕ್ಟ್ ಒಳಗೊಂಡ ಫ್ಯಾಮಿಲಿ ಎಮೋಷನ್ಸ್ ಕಥಾಹಂದರದ ಸಿನಿಮಾ.
ಚಿತ್ರದಲ್ಲಿ ನಾಯಕಿಯರಾಗಿ ರೆಚೆಲ್ ಡೇವಿಡ್, ರಚನಾ ರೈ ನಟಿಸುತ್ತಿದ್ದಾರೆ. ಈ ಹಿಂದೆ ‘ರಾಜರು’ ಚಿತ್ರ ನಿರ್ದೇಶಿಸಿದ್ದ ಗಿರೀಶ್ ಮೂಲಿಮನಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ದೇಶಕ ಗಿರೀಶ್ ಮೂಲಿಮನಿ, ಇನ್ನೂ 20 ದಿನ ಚಿತ್ರೀಕರಣ ಬಾಕಿ ಇದೆ.ಮಳೆಗಾಲ ಬೇಕಾಗಿರುವುದರಿಂದ ಮಳೆಗಾಲದಲ್ಲಿ ಚಿತ್ರೀಕರಣ ಮಾಡಲಾಗುವುದು ತರಾತುರಿಯಲ್ಲಿ ಚಿತ್ರ ಬಿಡುಗಡೆ ಮಾಡದೆ ಪಕ್ಕಾ ಪ್ಲಾನ್ ನೊಂದಿಗೆ ಸಿನಿಮಾ ಮಾಡಲಾಗುತ್ತಿದೆ ಎಂದಿದ್ದಾರೆ.
ಸ್ಯಾಂಡಲ್ ವುಡ್ ಅಂಗಳದ ಇಬ್ಬರು ಪ್ರತಿಭಾನ್ವಿತ ನಟರ ಕಾಂಬಿನೇಶನ್ ಒಳಗೊಂಡ ಈ ಚಿತ್ರ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಸ್ಪರ್ಶ ರೇಖಾ, ಹರಿಣಿ, ಚೇತನ್ ದುರ್ಗ, ಅಭಿಷೇಕ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಕೆ. ರವಿವರ್ಮಾ ಸಾಹಸ, ಉದಯ್ ಲೀಲಾ ಕ್ಯಾಮೆರಾ ವರ್ಕ್, ಗುಮ್ಮಿನೇನಿ ವಿಜಯ್ ಸಂಗೀತ ಚಿತ್ರಕ್ಕಿದೆ.