
ಸಂಜೆವಾಣಿ ವಾರ್ತೆ
ಸಂಡೂರು :ಜು:30: ಸಂಡೂರು ತಾಲ್ಲೂಕಿನಲ್ಲಿ 26 ಗ್ರಾಮ ಪಂಚಾಯತಿಗಳು 133 ಹಳ್ಳಿಗಳು ಈ ತಾಲ್ಲೂಕಿನಲ್ಲ ಓಳಪಟ್ಟಿವೆ. ಈ ತಾಲ್ಲೂಕಿನಲ್ಲಿ ವಿಶೇಷತೆ ಹೊಂದಿದ 2 ಗ್ರಾಮಗಳೆಂದರೆ ಸಂಡೂರು ಹೋಬಳಿಯ ಭುಜಂಗನಗರ ಗ್ರಾಮ ಇನ್ನೊಂದು ಚೋರನೂರು ಹೋಬಳಿಯ ತ್ಯಾಗದಾಳ್ ಗ್ರಾಮ ಈ ಎರೆಡು ಗ್ರಾಮಗಳ ವೈಶಿಷ್ಟ್ಯ ವೇನೆಂದರೆ ಭುಜಂಗನಗರ ಗ್ರಾಮಗಳಲ್ಲಿ 2000ಕ್ಕೂ ಹೆಚ್ಚು ಮನೆಗಳಿಗೆ ಆದರೆ ಇಲ್ಲಿ ಪ.ಪಂ. / ಪ. ಜಾತಿ / ಲಿಂಗಾಯತ ಧರ್ಮವನ್ನ ಪಾಲಿಸುವವರೆ ಅಧಿಕ. ಈ ಗ್ರಾಮದಲ್ಲಿ ಬಹುಮುಖ್ಯ ವಿಶೇಷತೆ ಏನೆಂದರೆ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲದೇ ಒಂದು ಪುಟ್ಟ ಗ್ರಾಮ. ಆದರೂ, ಜನತೆಗೆ ಮೋಹರಂ ಬಂತೆಂದರೆ ಸಾಕು. ಊರಿಗೆ ಊರು ತಳಿರು ತೋರಣಗಳಿಂದ ವಿದ್ಯುತ್ ಅಲಂಕಾರದಿಂದ ಶೃಂಗಾರಗೊಳ್ಳುವುದಲ್ಲದೇ ಈ ಹಬ್ಬವನ್ನು ನಾಡ ಹಬ್ಬವಾಗಿ ಆಚರಿಸುವುದಲ್ಲದೇ ಮೊಹರಂ ಕೊನೆಯದಿನ ಪೀರ್ ಸ್ವಾಮಿಗೆ ನಮಿಸಿ ಭಕ್ತಿ ಸಮಿರ್ಪಿಸುವುದನ್ನ ನಾವು ಕಾಣುತ್ತೇವೆ. ಇಲ್ಲಿನ ಜನರಿಗೆ ಸ್ವಾಮಿಯ ಮಾತೆ ವೇದವಾಖ್ಯ.
ಸಂಡೂರು ತಾಲ್ಲೂಕಿನ ಕೃಷ್ಣಾನಗರ ಗ್ರಾಮದಲ್ಲಿ ವಾಸಿಸುವ ಮುಜಾಫರ್ ವಂಶಸ್ತರು ತಲತಲಾಂತರಗಳಿಂದ ಪೀರ್ ಸ್ವಾಮಿಯ ಸೇವೆಯನ್ನ ಸಲ್ಲಿಸುತ್ತಾ ಬಂದಿದ್ದಾರೆ. ಕುಟುಂಬದ ಸದಸ್ಯರಲ್ಲಿ ಓರ್ವರು ಮುಸ್ಲಿಂ ಸಂಪ್ರದಾಯದಂತೆ ಮಡಿವಂತಿಕೆಯಿಂದ ಸ್ವಾಮಿಯನ್ನ ಹೊತ್ತುಕೊಂಡು ಕೆಂಡವನ್ನು ಆಯ್ದು ವರ್ಷದ ಮಳೆ, ಬೆಳೆ, ಬಿತ್ತನೆಯ ಸಮಯ ಮಕ್ಕಳನ್ನು ಹಿರಿಯರನ್ನ ಕಾಡುವ ರೋಗಗಳ ಬಗ್ಗೆ ಗ್ರಾಮಸ್ಥರು ಮಾಡಬಹುದಾದ ಆಚರಣೆಗೆ ಭವಿಷ್ಯವನ್ನು ನುಡಿಯುವರು. ಗ್ರಾಮದ ಜನತೆ ಇವರ ವಾಖ್ಯವನ್ನು ಚಾಚುತಪ್ಪದೇ ನಡೆಸುಕೊಂಡು ಬರುವುದು ವಿಶೇಷವಾಗಿದೆ. ಇಲ್ಲಿ ಮುಖ್ಯ ಗಮನಿಸಬೇಕಾದ ಒಂದು ಪ್ರಮುಖ ಅಂಶ ಏನೆಂದರೆ, 12ನೇ ವರ್ಷಗಳಿಗೊಮ್ಮೆ ಗ್ರಾಮದೇವತೆಯ ಜಾತ್ರೆಯನ್ನು ಹೊರತು ಪಡಿಸಿದರೆ ವರ್ಷಕ್ಕೊಮ್ಮೆ ಪೀರ್ ಸ್ವಾಮಿಯ ಹಬ್ಬವನ್ನು ನಮ್ಮ ಹಿರಿಯರು ಶ್ರದ್ದಾ ಭಕ್ತಿಯಿಂದ ನಡೆಸಿಕೊಂಡು ಬಂದು ಕೋಮು ಸೌಹರ್ದ ಕಾಪಾಡುವಲ್ಲಿ ಯಶಸ್ವಿಯಾದರು.
ಹಬ್ಬದ ವಿಶೇಷ : ರೋಗರುಜಿನುಗಳಿಂದ ಮುಕ್ತಿ ದೊರೆತವರು ಮನೆಯಲ್ಲಿ ಚಿಕ್ಕಮಕ್ಕಳು ಇರುವವರು ಸ್ವಾಮಿ ಆಶೀರ್ವಾದದಿಂದ ಜನಿಸಿದೆ ಎನ್ನುವ ಕೃತಾರ್ಥ ಭಾವನೆಯಿಂದ ಮಕ್ಕಳು ತೂಗುವಷ್ಟು ಸಕ್ಕರೆಯನ್ನು ಸ್ವಾಮಿಗೆ ಸಮರ್ಪಿಸುವ ಸಂಪ್ರದಾಯವನ್ನು ತಲತಲಾಂತರಿದಂದ ನಡೆಸಿಕೊಂಡು ಬಂದಿರುವುದು ವಿಶೇಷವಾಗಿದೆ.
ತ್ಯಾಗದಾಳದಲ್ಲಿ ಆಚರಣೆಯಿಲ್ಲ. : ಚೋರನೂರು ಹೋಬಳಿ ತ್ಯಾಗದಾಳ ಗ್ರಾಮದಲ್ಲಿ 120 ಮನೆಗಳು 750 ಜನಸಂಖ್ಯ ಇರುವ ಒಂದು ಪುಟ್ಟ ಗ್ರಾಮದಲ್ಲಿ ಭುಜಂನಗರ ನಗರ ಗ್ರಾಮದಲ್ಲಿ ತದ್‍ವಿರುದ್ದವಾಗಿದೆ. ತ್ಯಾಗದಾಳ ಗ್ರಾಮದಲ್ಲಿ ಪ.ಪಂ. / ಪ.ಜಾ/ ಲಿಂಗಾಯತ ಧರ್ಮ ಇಲ್ಲವೇ ಇಲ್ಲ. ಇಲ್ಲಿ ಬರೀ ಅಲ್ಪ ಸಂಖ್ಯಾತ ಬಂದುಗಳು ವಾಸವಾಗಿರುವ ಜನತೆಯನ್ನ ಕಾಣಬಹುದು ಇಲ್ಲಿ ಒಂದು ವಿಶೇಷ ಏನೆಂದರೆ ಮೊಹರಂ ಹಬ್ಬ ಅಚರಣೆಯಿಲ್ಲ. ಮನೆಯಲ್ಲಿ ಪೂಜಾ ವಿಧಿವಿಧಾನಗಳು ಮಾತ್ರ ನೆರವೇರುವವರು ಎಂದು ತ್ಯಾಗದಾಳು ಗ್ರಾಮದ ಸುಭಾನ್ ಸಾಹೇಬರ ಮಗ ಅಲಿಸಾಹೇಬರು ಸಂಜೆವಾಣಿ ವರದಿಗಾರರ ಜೊತೆ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು.
One attachment • Scanned by Gmail