ಭೀಮ ಕೋರೆಗಾಂವ್ ಪ್ರಕರಣ: ಮಹೇಶ್ ರಾವುತ್ ಗೆ ಜಾಮೀನು

ಮುಂಬೈ, ಸೆ.21-2018 ರ ಭೀಮಾ ಕೋರೆಗಾಂವ್ – ಎಲ್ಗರ್ ಪರಿಷತ್ ದೊಡ್ಡ ಪಿತೂರಿ ಪ್ರಕರಣದ ಆರೋಪಿ ಮಹೇಶ್ ರಾವುತ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.

ಈ ಪ್ರಕರಣದಲ್ಲಿ ಜಾಮೀನು ಪಡೆದ ಆರನೇ ವ್ಯಕ್ತಿಯಾಗಿದ್ದಾರೆ. ಆದರೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಎರಡು ವಾರಗಳ ಕಾಲ ತಡೆ ಕೋರಿ ಸಲ್ಲಿಸಿದ್ದ ಮನವಿ ಮೇರೆಗೆ ಜಾಮೀನು ನೀಡುವ ಆದೇಶಕ್ಕೆ ಹೈಕೋರ್ಟ್ ಒಂದು ವಾರ ತಡೆ ನೀಡಿದೆ.

ರಾವುತ್, ಬುಡಕಟ್ಟು ಹಕ್ಕುಗಳ ಕಾರ್ಯಕರ್ತ,  2018ರ ಜೂನ್ 6,ರಂದು ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದ ಪ್ರಕರಣದಲ್ಲಿ ಬಂಧಿಸಲಾಗಿತ್ತು.ಅಂದಿನಿಂದ ಜೈಲಿನಲ್ಲಿದ್ದರು

ನ್ಯಾಯಮೂರ್ತಿಗಳಾದ ಎಎಸ್ ಗಡ್ಕರಿ ಮತ್ತು ಶರ್ಮಿಳಾ ದೇಶಮುಖ್ ಅವರನ್ನೊಳಗೊಂಡ ವಿಭಾಗೀಯ ಪೀಠ, ರಾವುತ್ ವಿರುದ್ಧ ಆರೋಪ ಹೊರಿಸಲಾದ ಹಲವಾರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ನಿಬಂಧನೆಗಳು ಪ್ರಾಥಮಿಕವಾಗಿ ಅನ್ವಯಿಸುವುದಿಲ್ಲ ಎಂದು ಅಭಿಪ್ರಾಯಪಟ್ಟು ಜಾಮೀನು ನೀಡಿದೆ.

ಎನ್‌ಐಎ ಪ್ರತಿಪಾದಿಸಿದಂತೆ ತಮ್ಮ ಕಕ್ಷಿದಾರರು ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಸದಸ್ಯರಲ್ಲ, ಆದರೆ ವಾಸ್ತವವಾಗಿ ಪ್ರಧಾನಿಯವರ ಫೆಲೋಶಿಪ್ ಪಡೆದವರು ಎಂದು ರಾವುತ್ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮಿಹಿರ್ ದೇಸಾಯಿ ವಾದಿಸಿ ಗಡ್ಚಿರೋಲಿಯಲ್ಲಿ ಆದಿವಾಸಿಗಳಿಗಾಗಿ ಕೆಲಸ ಮಾಡುವ ಕಾರ್ಯಕರ್ತ ಎಂದು ಅವರು ತಿಳಿಸಿದ್ದಾರೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ದೇವಾಂಗ್ ವ್ಯಾಸ್ ಮತ್ತು ವಕೀಲ ಸಂದೇಶ್ ಪಾಟೀಲ್ ಪ್ರತಿನಿಧಿಸಿದ ಎನ್‌ಐಎ ದೇಶದ ವಿರುದ್ಧ ಯುದ್ಧ ನಡೆಸಲು ದೊಡ್ಡ ಪಿತೂರಿ ನಡೆದಿದೆ ಮತ್ತು ಅದನ್ನು ಪರಿಗಣಿಸಬೇಕು ಮತ್ತು ವಿಚಾರಣಾ ನ್ಯಾಯಾಲಯ ಜಾಮೀನನ್ನು  ಸರಿಯಾಗಿ ತಿರಸ್ಕರಿಸಬೇಕು ಎಂದು  ವಾದಿಸಿದ್ದರು

ಜ್ಯೋತಿ ರಘೋಬಾ ಜಗತಾಪ್, ಸಾಗರ್ ತಾತ್ಯಾರಾಮ್ ಗೋರ್ಖೆ, ರಮೇಶ್ ಮುರಳೀಧರ್ ಗೈಚೋರ್, ಸುಧೀರ್ ಧಾವಲೆ, ಸುರೇಂದ್ರ ಗಡ್ಲಿಂಗ್, ಮಹೇಶ್ ರಾವುತ್, ಶೋಮಾ ಸೇನ್, ರೋನಾ ವಿಲ್ಸನ್, ಅರುಣ್ ಫೆರೇರಾ, ಸುಧಾ ಭಾರದ್ವಾಜ್, ವರವರ ರಾವ್, ವೆರ್ನಾನ್ ಗೊನ್ಸಾಲ್ವೆಸ್ ಎಂಬ 16 ಮಂದಿಯನ್ನು ಆರೋಪಿಗಳೆಂದು ಆರೋಪಿಸಲಾಗಿದೆ. ,

ಇನ್ನೂ  8 ಮಂದಿ ಇನ್ನೂ ಜೈಲಿನಲ್ಲಿದ್ದಾರೆ ಮತ್ತು ಫಾದರ್ ಸ್ಟಾನ್ ಸ್ವಾಮಿ ನಿಧನರಾಗಿದ್ದಾರೆ.