ಭೀಮ್ ನಗರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಯಡ್ರಾಮಿ:ಮಾ.24:ತಾಲೂಕಿನ ಇಜೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಭೀಮನಗರ್ ಶಾಲೆಯಲ್ಲಿ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ಹಾಗೂ ನೂತನವಾಗಿ ಆಯ್ಕೆಯಾದ ಎಸ್,ಡಿ,ಎಂ,ಸಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು.

ನೂತನ ಅಧ್ಯಕ್ಷರಾದ ಅಶೋಕ ಕಟ್ಟಿಮನಿ ಉಪಾಧ್ಯಕ್ಷರಾದ ರೇಣುಕ ಬಾಬು ಕಟ್ಟಿಮನಿ ಹಾಗೂ ಸರ್ವ ಸದಸ್ಯರನ್ನು ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಶ್ರೀಮತಿ ಅಕ್ಷತಾ ವಿ ನಂದಿ ಶ್ರೀಮತಿ ಭಾಗ್ಯ ಜ್ಯೋತಿ ಮಹಬೂಬ್ ಅಸ್ಕಿ ವಿಶೇಷವಾಗಿ ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಬಸವರಾಜ್ ಕಟ್ಟಿಮನಿ. ರವಿ ಶ್ರುತಿ,ಮಾನಪ್ಪ ಕಟ್ಟಿಮನಿ,ರಾಜೀವ್ ಗಾಂಧಿ ಕಟ್ಟಿಮನಿ, ತಾಯಪ್ಪ ಎಸ್ ನಾಯಕ, ಶರಣು ಬಿ ಮದರಿ, ಶಿವಪ್ಪ ಕಟ್ಟಿಮನಿ,ಪಪ್ಪು ಕಟ್ಟಿಮನಿ, ಊರಿನ ಪ್ರಮುಖರು ಭಾಗಿಯಾಗಿದ್ದರು