ಭೀಮೆಯ ಆರ್ಭಟಕ್ಕೆ ನಲುಗಿದ ಜಾನುವಾರುಗಳಿಗೆ ಮೇವಿಲ್ಲ ನೆರವಿಗೆ ಅಂಗಲಾಚಿದ ರೈತ

ಆಲಮೇಲ್:ನ.1:ಮಹಾರಾಷ್ಟ್ರದಲ್ಲಿ ಸುರಿದ ಮಹಾ ಮಳೆಯಿಂದ ಈ ವರ್ಷ ಭೀಮಾನದಿ ಅಪಾಯ ಮಟ್ಟ ಮೀರಿ ಹರಿದ್ದು ಸುಮಾರು ವರ್ಷದಿಂದ ಹಾನಿ ಆಗದಷ್ಟು ಪ್ರಕೃತಿ ಹಾಳು ಮಾಡಿ, ಹಲವಾರು ಗ್ರಾಮಗಳ ಜನರ ಹೊಟ್ಟೆಯ ಮೇಲೆ ಬರೆ ಎಳದಿದೆ,ಅದರಲ್ಲಿ ಭೀಮಾನದಿಯ ಪ್ರವಾಹಕ್ಕೆ ಸಿಕ್ಕು ರೈತರು ಮಾತ್ರ ಸಂಪೂರ್ಣವಾಗಿ ಕಂಗಾಲಾಗಿದ್ದು ಭಿಮಾನದಿಯ ನೀರಿನಲ್ಲಿ ರೈತ ತನ್ನ ಜಮೀನಿನಲ್ಲಿ ಬೆಳೆದ ಬೆಳೆಯೂ ಕೊಚ್ಚಿ ಹೋಗಿದೆ,ಮನೆಯೂ ಹೋಗಿದೆ,ಜಾನುವಾರುಗಳಿಗೆ ಕಾದು ಇಟ್ಟ ಮೇವಿನ ರಾಶಿಯೂ ಕೊಚ್ಚಿಹೋದ ಘಟನೆ ನಡೆದಿದ್ದು ಜಾನುವಾರುಗಳಿಗೆ ಮೇವು ಇಲ್ಲದೆ ರೈತರು ಕಂಗಾಲಾಗಿದ್ದು ಸಾಕಿದ ಪ್ರಾಣಿಗಳು ಮಾರುವ ಸ್ಥಿತಿಗೆ ರೈತರು ಬಂದಿದ್ದಾರೆ.

ಭೀಮಾನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಸ್ಥಿತಿ ನೋಡಿದ ಸರಕಾರ ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ಗ್ರಾಮಗಳಿಂದ ಹೊರ ತಂದಿದ್ದಾರೆ ಮತ್ತು ಜನರಿಗೆ ಸಾಕಷ್ಟು ಆಹಾರದ ವ್ಯವಸ್ಥೆ ಮಾಡಿದ್ದಾರೆ ದಾನಿಗಳೂ ಕೂಡಾ ಜನರಿಗೆ ಆಹಾರ ಕಿಟ್,ಹಾಸಿಗೆ ಹೊದಿಕೆ ನೀಡಿದ್ದಾರೆ ಆದರೆ ಮಾತು ಬಾರದ ಮೂಕ ಪ್ರಾಣಿಗಳಿಗೆ ಮಾತ್ರ ಯಾವ ಸರಕಾರಿ ಅಧಿಕಾರಿಗಳು ಆಗಲಿ, ದಾನಿಗಳು ಆಗಲಿ ಮೇವು ನೀಡುವ ವ್ಯವಸ್ಥೆ ಮಾಡಿಲ್ಲ ಇದರಿಂದ ಸಾಕಿದ ಪ್ರಾಣಿಗಳ ಗೋಳಾಟ ಕೇಳಿದ ರೈತ ಮಾತ್ರ ಈಗ ಸಂಕಷ್ಟ ಅನುಭವಿಸುತ್ತಿದ್ದು ಪ್ರಾಣಿಗಳ ಮುಖ ನೋಡಿ ಅಳುತ್ತಾ ಕುತ್ತಿದ್ದಾನೆ, ಮಾತು ಬರುವ ನಮಗೆ ಅಧಿಕಾರಿಗಳು ಬೇಡಿದನ್ನೂ ತಂದು ಕೊಟ್ಟಿದ್ದಾರೆ ಕೊಡುವಾಗಲು ಹಲವಾರು ಬಾರಿ ಬೇಡಿ ಕೊಂಡಿದ್ದೆವೆ ಆದರೆ ಮೂಕ ಪ್ರಾಣಿಗಳಿಗೆ ಮಾತು ಬರಲ್ಲ ಅವುಗಳ ಕೂಗು ಅವರಿಗೆ ಹೇಗೆ ಕೇಳುತ್ತದೆ ಸಾಕಿದ ಯಜಮಾನರಾದ ನಮಗೆ ಮಾತ್ರ ಕೇಳುತ್ತದೆ ನಾವು ಎಷ್ಟೆ ಬಾರಿ ಹೇಳಿದರೂ ಅಧಿಕಾರಿಗಳು ಕ್ಯಾರೆ ಎನ್ನಲಿಲ್ಲ ಜಾನುವಾರಗಳ ಪರಿಸ್ಥಿತಿಯೂ ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ. ಒಟ್ಟಾರೆ ಮಾತು ಬರುವ ಜನರಿಗೆ ಎಷ್ಟೋ ಬಾರಿ ಬೇಡಿಕೊಂಡರೂ ಸರಿಯಾಗಿ ಸ್ಪಂದಿಸದ ಸರಕಾರಕ್ಕೆ ಈಗ ಮೂಕ ಪ್ರಾಣಿಗಳ ಗೋಳು ಹೇಗೆ ಅರ್ಥವಾಗುತ್ತದೆ ಕಾದು ನೋಡಬೇಕು


ಸರಕಾರ ನಮಗೆ ನದಿ ಬಂದಾಗ ಹೊರಗಡೆ ಕರೆದುಕೊಂಡು ಹೊಯಿತ್ತು ನಮಗೆ ಆಹಾರ,ಹಾಸಿಗೆ ನೀಡಿದ್ದಾರೆ ಆದರೆ ನಮಗೆ ನಂಬಿ ಕೊಂಡಿರುವ ನಮ್ಮ ಎಮ್ಮೆ,ಆಕಳಿಗೆ ಯಾವದೇ ಮೇವಿನ ವ್ಯವಸ್ಥೆ ಮಾಡಲಿಲ್ಲ, ನಮ್ಮ ಜಮೀನು ಕೂಡಾ ಮುಳಗಿವೆ ಅಲ್ಲಿ ನಾವು ಜಾನುವಾರುಗಳಿಗಾಗಿ ಕಾದು ಇಟ್ಟಿರುವ ಮೇವು ಕೂಡಾ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ, ನಾವು ಹಸಿವು ಆದಾಗ ಬೇಡಿ ಊಟಾ ಮಾಡಿದ್ದೆವೆ ಆದರೆ ಮಾತೇ ಬಾರದ ಪ್ರಾಣಿಗಳು ಮೌನವಾಗಿಯೇ ಕಾಲ ಕಳೆದಿವೆ, ಅವುಗಳ ಸಂಕಷ್ಟ ಕೇಳಿ ನಮಗೆ ಈಗ ಊಟಾ ಹೋಗುತ್ತಿಲ್ಲ ಜೀವನಕ್ಕೆ ಈಗ ಏನು ಇಲ್ಲ ಜಮೀನಲ್ಲಿ ಬೆಳೆಯೂ ಇಲ್ಲ, ಮನೆಯೂ ಇಲ್ಲ ಎಮ್ಮಿ ಇಟ್ಟುಕೊಂಡು ಹಾಲು ಮಾರಿ ಬದುಕಬೇಕು ಎಂದರೆ ಅದಕ್ಕೆ ಮೇವು ಇಲ್ಲ ಸರಕಾರ ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ ಗೋವು ಶಾಲೆ ಅಥವಾ ಮೇವು ಬ್ಯಾಂಕ್ ತೆರೆಯಬೇಕು ನಮ್ಮ ಜಾನುವಾರುಗಳಿಗೆ ಮೇವು ಪೂರೈಸಬೇಕು ಇಲ್ಲವೆಂದರೆ ನಾವು ಜಾನುವಾರುಗಳು ಮಾರಬೇಕಾಗುತ್ತದೆ, ಒಂದು ವೇಳೆ ಆ ಸ್ಥಿತಿ ಬಂದರೆ ನಾವು ಮೋದಲು ತಾಲೂಕು ಆಡಳಿತದ ಮುಂದೆ ಧನಕರುಗಳು ಕಟ್ಟಿ ಪ್ರತಿಭಟನೆ ಮಾಡುತ್ತೆವೆ.

                                    ಸದಾಶಿವ ರಾಮಚಂದ್ರ ಬಿರಾದಾರ

                                      ತಾರಾಪೂರ ರೈತ

ಸರಕಾರ ಉತ್ತರ ಕರ್ನಾಟದ ಪ್ರವಾಹ ಸಂದರ್ಭದಲ್ಲಿ ಜನರಿಗೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಲ್ಲ, ರಾಜ್ಯ ಸರಕಾರದ ಈ ವಿಫಲತೆಯಿಂದ ಜನರು ಇನ್ನೂ ಹೈರಾಣುನಲ್ಲಿ ಇದ್ದಾರೆ, ಜನರ ರಕ್ಷಣೆಗಾಗಿ ಕೋಟ್ಯಾಂತರ ಹಣ ನೀಡಿದ ಸರಕಾರಕ್ಕೆ ಜಾನುವಾರುಗಳ ಬದುಕಿನ ಬಗ್ಗೆ ಚಿಂತೆ ಇಲ್ವಾ? ಅವುಗಳ ಜೀವನದ ಬಗ್ಗೆ ಯೋಚನೆ ಮಾಡದೇ ಅವುಗಳ ರಕ್ಷಣೆ ಮಾಡುವದು ಬಿಟ್ಟರೆ ಅವುಗಳಿಗೆ ಆಹಾರ ಹಾಗೂ ಇತರೆ ವ್ಯವಸ್ಥೆ ಮಾಡಿಲ್ಲ, ಕೂಡಲೇ ಈಗ ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ ಮೇವು ಬ್ಯಾಂಕ್, ಅಥವಾ ಗೋವು ಶಾಲೆ ಪ್ರಾರಂಭಿಸಬೇಕು ಇಲ್ಲವಾದರೆ ರೈತರ ಜೊತೆಗೆ ಕಾಂಗ್ರೇಸ್ ಕೂಡಾ ಹೋರಾಟ ಮಾಡುತ್ತದೆ ಅಶೋಕ ಕೊಳಾರಿ ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆಲಮೇಲ