ಭೀಮಾ ನದಿ ತೀರದ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳ ಭೇಟಿ

ಇಂಡಿ :ಸೆ.18: ಉಜನಿ ಜಲಾಶಯದಿಂದ ಹೆಚ್ಚಿನ ಪ್ರಮಾಣ ನೀರು ಹರಿಯುತ್ತಿರುವ ಹಿನ್ನಲೆ ಭೀಮಾ ನದಿ ತೀರದ ಗ್ರಾಮಗಳಾದ ಹಿಂಗಣಿ, ಬರಗುಡಿ, ಗುಬ್ಬೆವಾಡ, ಅಗರಖೇಡ, ಗ್ರಾಮಗಳಿಗೆ ಜಿಲ್ಲಾಧಿಕಾರಿಗಳಾದ ಡಾ, ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ ಗಂಜೀ ಕೇಂದ್ರಗಳು ತೆರೆಯಲು ಅಧಿಕಾರಿಗಳಿಗೆ ಸೂಚಿಸಿದರು. ಉಪ ವಿಭಾಗಧಿಕಾರಿ ರಾಮಚಂದ್ರ ಗಡದೆ, ತಹಶೀಲ್ದಾರ್ ನಾಗಯ್ಯ ಹಿರೇಮಠ, ವೃತ್ ನಿರೀಕ್ಷೆಕ ಬಸವರಾಜ ರಾವುರ, ಗ್ರಾಮೀಣ ಠಾಣಾ ಪಿ ಎಸ್ ಆಯ್ ಅಶೋಕ ನಾಯಕ, ಹಾಗೂ ಪಂಚಪ್ಪ ಮರಗೂರ್, ಸಿದ್ದಾರೂಢ ಮರಗೂರ್ ಸೇರಿದಂತೆ ಗ್ರಾಮಸ್ಥರು ಇದ್ದರು.