ಭೀಮಾ ಕೋರೆಗಾಂವ ವೀರ ಯೋಧರ ವಿಜಯೋತ್ಸವ

(ಸಂಜೆವಾಣಿ ವಾರ್ತೆ)
ನವಲಗುಂದ,ಫೆ 12: ನಗರದಲ್ಲಿರುವ ಶಿಕ್ಷಕರ ಸಹಕಾರಿ ಸಭಾಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆ ಹಾಗೂ 206 ನೇ ಭೀಮಾ ಕೋರೆಗಾಂವ ವೀರ ದಲಿತ ಯೋಧರ ವಿಜಯೋತ್ಸವ ಕಾರ್ಯಕ್ರಮವನ್ನು ಶಾಸಕ ಎನ್ ಎಚ್ ಕೋನರಡ್ಡಿ ಉದ್ಘಾಟಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳಾದ ಅನಿಲಕುಮಾರ ಪಾಟೀಲ, ವಿನೋದ ಅಸೂಟಿ, ಬೆಳಗಾವಿ ವಿಭಾಗದ ಸಂಚಾಲಕರು ಹೈಕೋರ್ಟ್ ವಕೀಲರು ಶ್ರೀಮಂತ ನಡುವಿನಕೇರಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ ಅವರು 206 ನೇ ಭೀಮಾ ಕೋರೆಗಾಂವ ವೀರ ದಲಿತ ಯೋಧರ ವಿಜಯೋತ್ಸವ ಕುರಿತು ಮಾತನಾಡಿದರು.

ಹಿರಿಯ ದಲಿತ ಮುಖಂಡರು ಬಸವರಾಜ ಮುಧೋಳ, ರಾಜು ನಡುವಿನಮನಿ, ನಂದಿನಿ ಹಾದಿಮನಿ ನವಲಗುಂದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ್ ಭೋವಿ, ಚೆನ್ನಮ್ಮ ಕಾಳೆ, ಶಾಂತವ್ವ ಮಾಳನ್ನವರ, ಕಸ್ತೂರೆವ್ವ ರಾಯನಾಯ್ಕರ, ನಾಗಲಿಂಗಪ್ಪ ದೊಡ್ಡಮನಿ, ಬಸವರಾಜ ಇಮ್ಮಡಿ, ಪರಶುರಾಮ ಚಲವಾದಿ, ಈರಣ್ಣ ಶಿಡಗಂಟಿ,ಪುಂಡಲೀಕ ಚಲವಾದಿ, ಮಹಾಂತೇಶ ಚಲವಾದಿ, ನಾಗರಾಜ್ ಕಾಳಿ, ಶಿವಾನಂದ ಚಲವಾದಿ, ಮೃತ್ಹುಂಜಯ ಚಲವಾದಿ, ಸಂತೋಷ ಹೆಬ್ಬಾಳ, ನಿಂಗಪ್ಪ ಕಾಳಿ, ಹನಮಂತ ಚಲವಾದಿ, ಮಂಜುನಾಥ್ ಗಿರಣ್ಣವರ, ನಿಂಗವ್ವ ಚಲವಾದಿ, ರೇಖಾ ಚಲವಾದಿ, ಸರೋಜ ಹೊಸಮನಿ, ಅಷ್ವಿನಿ ಚಲವಾದಿ ಸೇರಿದಂತೆ ನವಲಗುಂದ ಅಣ್ಣಿಗೇರಿ ತಾಲೂಕ ದಲಿತ ಸಂಘರ್ಷ ಸಮಿತಿಯ ಎಲ್ಲ ಪದಾಧಿಕಾರಿಗಳು ಸಮಾಜದ ಮುಖಂಡರು, ಹಲವಾರು ಗ್ರಾಮದ ಗುರು ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.