ಭೀಮಾ ಕೋರೆಗಾಂವ ಜಾತಿಯತೆ ವಿರುದ್ಧ ನಡೆದ ಯುದ್ಧ

ಕಲಬುರಗಿ,ಡಿ.2-ಚರಿತ್ರೆಯಲ್ಲಿ ರಾಜ್ಯಕ್ಕಾಗಿ, ಸಿಂಹಾಸನಕ್ಕಾಗಿ, ಧರ್ಮ ಕ್ಕಾಗಿ, ಹೆಣ್ಣು, ಹೊನ್ನು, ಮಣ್ಣಿಗಾಗಿ ಯುದ್ಧಗಳು ನಡೆದರೆ, ಭೀಮಾ ಕೋರೆಗಾಂವ್ ಯುದ್ಧವೂ “ಮಹಾರ”ರ ಸ್ವಾಭಿಮಾನಕ್ಕಾಗಿ, ಘನತೆಗಾಗಿ ಮತ್ತು ಜಾತೀಯತೆ ವಿರುದ್ಧ ನಡೆದ ಯುದ್ಧವಾಗಿದೆ ಎಂದು ನಿವೃತ್ತ ಉಪನ್ಯಾಸಕ ಡಾ.ಕೆ.ಎಸ್.ಬಂದು ಸಿದ್ದೇಶ್ವರ ಹೇಳಿದರು.
ಶಹಾಬಾದ ತಾಲ್ಲೂಕಿನ ಮರತೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ ವಿಜಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಭೀಮಾ ಕೋರೆಗಾಂವ ಯುದ್ಧದಲ್ಲಿ ವೀರಮರಣ ಹೊಂದಿದ ಮಹಾರ ಸೈನಿಕರಿಗೆ ಪ್ರತಿವರ್ಷವೂ ಡಾ.ಅಂಬೇಡಕರ ರವರು ಗೌರವ ಸಲ್ಲಿಸಿ, ತಮ್ಮ ಅನುಯಾಯಿಗಳಿಗೆ ನಾಮಾಂತರ, ಸ್ಥಳಾಂತರ, ಧಮಾರ್ಂತರ ಮಾಡಿರೆಂದರು ಎಂದು ಸಲಹೆ ನೀಡಿದ್ದರು ಎಂದು ತಿಳಿಸಿದರು.
500 ಮಹಾರ ಸೈನಿಕರು, 28 ಸಾವಿರ ಪೇಶ್ವೆ ಸೈನಿಕರ ನಡುವೆ ನಡೆದ ಯುದ್ಧದಲ್ಲಿ ಮಹಾರ ಸೈನಿಕರು ಜಯಶೀಲರಾದರು. ಯೋಧರ ಧೈರ್ಯ, ಸಾಹಸದ ಬಗ್ಗೆ ಮೆಚ್ಚುಗೆಯ ಮಾತನಾಡಿದ ಬಾಬಾಸಾಹೇಬರು ” ಮಹಾರರು ಬಲು ಶೂರರೂ, ಈ ಜನಾಂಗದಲ್ಲಿ ಜನಿಸಿದಕ್ಕೆ ನಾನು ಜನಿಸಿದಕ್ಕೆ ಗರ್ವವಿದೆ” ಎಂದಿದ್ದರು ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಡಾ.ರವೀಂದ್ರ ನಿರಾಣೆ ಅವರು “ಇತಿಹಾಸ ಮರೆತವರು, ಇತಿಹಾಸ ನಿರ್ಮಿಸಲಾರರೆಂದು” ಡಾ.ಅಂಬೇಡಕರ ರವರ ಮಹಾನ ವಿಚಾರಧಾರೆಗಳನ್ನು ಜೀವನದಲ್ಲಿ ಅನುಸರಿಸಿರೆಂದರು. ಸಮಾರಂಭ ದ ಸಾನಿಧ್ಯ ವಹಿಸಿದ್ದ ಭಂತೆ ವರಜ್ಯೋತಿ ಅವರು ತ್ರಿಸರಣ, ಪಂಚಶೀಲ ಬೋಧಿಸಿದರು.
ಶೌಕತಲಿ, ಶಾಮರಾವ ಪಾಟೀಲ, ನೀಲಕಂಠ ರಾವ ಕೊಂಡಗುಳಿ, ಗುರುನಾಥ ಕಂಬಾನೂರ,.ಸಂಜೀವ ಕುಮಾರ, ಉಪಸ್ಥಿತರಿದರು. ಮೊದಲಿಗೆ ಮಲ್ಲಿಕಾರ್ಜುನ ದೊಡ್ಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮಾಶಂಕರ ಕಾಂಬಳೆ ವಂದಿಸಿದರು. ಮಕ್ಕಳಿಂದ ಕ್ರಾಂತಿ ಗೀತೆ, ಸಾಂಸ್ಕøತಿಕ ನಡೆದವು.