ಭೀಮಾತೀರ ಮಹಾತ್ಮರ ಪುಣ್ಯತಾಣ:ಬಿ ಡಿ ಪಾಟೀಲ

ಇಂಡಿ:ಸೆ.22:ಭೀಮಾತೀರ ಮಾಹತ್ಮರ ಪೂಣ್ಯತಾಣ, ಇಲ್ಲಿ ಹಲವಾರು ಶರಣರು ಸಾಧುಸತಂತರು ನೆಲೆಸಿ ಪಾವನ ಮಾಡಿದ್ದಾರೆ.ಜಾತಿ ,ಮತ, ಎಣಿಸದೆ ಸೌಹಾರ್ದ ದಿಂದ ಬಾಳಿದ್ದಾರೆ.ಜೆಟ್ಟಂಗೇಶ್ವರ ಸಪ್ತಾಹ ಕಾರ್ಯಕ್ರಮ ಸರ್ವಧಮಿಯರು ಕೋಮು ಸೌಹಾರ್ದದಿಂದ ಆಚರಣೆ ಮಾಡುತ್ತಿದ್ದಾರೆ ಇದು ನಮ್ಮೆಲ್ಲರಿಗೂ ಮಾರ್ಗದರ್ಶಿಯಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲ ಹೇಳಿದರು. ತಾಲೂಕಿನ ಹಿಂಗಣಿ ಗ್ರಾಮದ ಶ್ರೀ ಜೆಟ್ಟಿಂಗೇಶ್ವರ ದೇವರ 9ನೆಯ ವರ್ಷದ ಸಪ್ತಾಹ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.ವೇದಿಕೆ ಮೇಲೆ ಶ್ರೀ ಶೈಲಗೌಡ ಪಾಟೀಲ ಅಯೂಬ್ ನಾಟೀಕರ ಸಿದ್ದು ಡಂಗಾ, ರಮೇಶ ಬಿರಾದಾರ,ಸಿದ್ದುಗೌಡ ಕುಂಬಾರ, ಯಲ್ಲಪ್ಪ ಕಟ್ಟಿಮನಿ,ಹಿಮ್ಮತಲಾಲ ಜಮಾದಾರ, ಶಾಮರಾಯ ಬನ್ನಿ,ಪ್ರಕಾಶ ಕಟ್ಟಿಮನಿ,ಮಲ್ಲು ಕೋಳಿ, ರಾಜಕುಮಾರ ಕೋಳಿ,ಅಂಬಣ್ಣಾ ಗುಬ್ಯಾಡ,ಅಮಸಿದ್ದ ಕೋಳಿ,ಗುಂಡಪ್ಪ ಕೋಳಿ,ಅಂಬಣ್ಣ ಕೋಳಿ , ವಿಶ್ವನಾಥ ಕಟ್ಟಿಮನಿ,ಸಚಿನ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.